»   » ಕುಣಿಲಾರದ ಹುಡುಗ್ರ ಕಾಲು ಕುಂಟೆಂದ ಶುಭಾ

ಕುಣಿಲಾರದ ಹುಡುಗ್ರ ಕಾಲು ಕುಂಟೆಂದ ಶುಭಾ

Posted By:
Subscribe to Filmibeat Kannada

ಶುಭ ನುಡಿ ಕೇಳಿದ್ದೀರಾ. ಶುಭ ಗಾನ ಈಗ ಕೇಳಲು ಸಿದ್ಧರಾಗಿ. ನಾಯಕಿ ಶುಭ ಪೂಂಜಾ ಅವರು ವೃತ್ತಿ ಜೀವನದಲ್ಲಿ ಮೊದಲ ಬಾರಿ ಹಾಡು ಹೇಳಿದ್ದಾರೆ. ಅವರಿಗೆ ಹಾಡು ಹೇಳಲು ಶುಭ ಕಾಲ ಬಂತು ಅಂತ ಆಯಿತು.

"ಕುಣಿಲಾರದ ಹುಡುಗ್ರು ಕಾಲೆ ಕುಂಟಂತೆ, ಕೈಗೆ ಸಿಗದ ಹಣ್ಣನು ಹುಳಿ ಮಾವು ಅಂದ್ರಂತೆ, ಇರಲಾರದೇ ಇರುವೆ ಬಿಟ್ಕೋಂಡ್ ಕೆರ್ಕೋಂಡ್ರೆ ನಾನೇನು ಮಾಡೋದು ಐಲು ಪೈಲು..... ಎಂಬ ಗೀತೆಯನ್ನು ಶುಭ ಪೂಂಜಾ ಅವರು ಸೂರ್ಯವಂಶಿ ಅವರ ಸಂಗೀತ ನಿರ್ದೇಶನದಲ್ಲಿ ಹಾಡು ಹೇಳಿದ್ದಾರೆ.


ಇದೆ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರದು ಅತಿಥಿ ಪಾತ್ರ ಪೋಷಿಸಿದ್ದಾರೆ. ಐವರು ನಿರ್ದೇಶಕರು ವಿ. ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ, ಜಗ್ಗೇಶ್, ನೆನಪಿರಲಿ ಪ್ರೇಮ್ ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಿದ್ದಾರೆ.

ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಅನೇಕ ತರ್ಲೆಗಳನ್ನು ಒಂದು ಮನರಂಜನಾತ್ಮಕ ರೀತಿಯಲ್ಲಿ ಹೇಳಲಿದ್ದಾರೆ. ನಿರ್ಮಾಪಕ ಸಚ್ಚಿದಾನಂದ್ ಮತ್ತು ಸುರೇಶ್ ಕುಮಾರ್ ಅವರು ಗ್ರೀನ್ ಲೈನ್ ಟ್ರಾವೆಲ್ಸ್ ಅಡಿಯಲ್ಲಿ ಈ 'ತರ್ಲೆ ನನ್ ಮಕ್ಳು' ತಯಾರಾಗುತ್ತಿದೆ.

ಈ ಚಿತ್ರದ ಮುಖಾಂತರ ಸೂರ್ಯವಂಶಿ ಡೀಜೆ ಸಂಗೀತ ನಿರ್ದೇಶನಕ್ಕೆ ಆಗಮಿಸಿದ್ದಾರೆ. ಜೇರಾಲ್ಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಯತಿರಾಜ್, ಅಂಜನ ದೇಶ್ ಪಾಂಡೆ, ನಾಗಶೇಖರ್, ಶುಭಾ ಪೂಂಜಾ, ಸೌಜನ್ಯಾ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Shubha Punja Sings a Song For Kannada movie 'Tarle Nanmaklu'. Suryavamshi has composed tunes for the movie and Diamond Star Srinagara Kitty has also played a cameo. The movie directed by Rakesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada