For Quick Alerts
  ALLOW NOTIFICATIONS  
  For Daily Alerts

  ಗಾಯಕಿ, ಸಂಗೀತ ನಿರ್ದೇಶಕಿ 'ವಾಣಿ ಹರಿಕೃಷ್ಣ' ಸಂದರ್ಶನ

  |
  <ul id="pagination-digg"><li class="next"><a href="/music/vani-harikrishna-kannada-singer-music-director-talks-069346.html">Next »</a></li></ul>

  ಗಾಯಕಿ ಹಾಗೂ ಇತ್ತೀಚಿಗೆ ಸಂಗೀತ ನಿರ್ದೇಶಕಿ ಪಟ್ಟವನ್ನು ಪಡೆದ 'ವಾಣಿ ಹರಿಕೃಷ್ಣ' ಅವರದು ಚಿರಪರಿಚಿತ ಹೆಸರು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾಗಿರುವ, ಸದ್ಯ ಕನ್ನಡದ 'ಟಾಪ್' ಸಂಗೀತ ನಿರ್ದೇಶಕ 'ವಿ ಹರಿಕೃಷ್ಣ' ಅವರ ಪತ್ನಿ ಈ ವಾಣಿ ಹರಿಕೃಷ್ಣ. ಇಷ್ಟೇ ಅಲ್ಲ, ಹಿಂದೊಮ್ಮೆ ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದ ಸಂಗೀತ ಸಾಮ್ರಾಜ್ಯವನ್ನು ಆಳಿದ ಖ್ಯಾತ ಸಂಗೀತ ನಿರ್ದೇಶಕ 'ಜಿಕೆ ವೆಂಕಟೇಶ್' ಅವರ ಮೊಮ್ಮಗಳು ವಾಣಿ ಹರಿಕೃಷ್ಣ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ.

  ಹುಟ್ಟಿನಿಂದಲೂ ಸಂಗೀತದ ನಂಟು ಹೊತ್ತು ಬಂದ ವಾಣಿಯವರು, ಜನ್ಮದತ್ತವಾಗಿ ತಮಗಿರುವ ಪ್ರತಿಭೆಯನ್ನು ಕಾಲಕಾಲಕ್ಕೆ ಬೆಳೆಸಿಕೊಂಡು ಬಂದವರು. ತಮ್ಮ ಚಿಕ್ಕತಾತ ಜಿಕೆ ವೆಂಕಟೇಶ್ ಅವರಿಂದ ಬಂದ ಸಂಗೀತದ ಬಳುವಳಿಯ ಜೊತೆಗೆ ದಿಗ್ಗಜ 'ಇಳೆಯರಾಜಾ' ಎಂಬ 'ಗಾಡ್ ಫಾದರ್' ಕೂಡ ಪಡೆದ ಅದೃಷ್ಟಲಕ್ಷ್ಮೀ ಈ ವಾಣಿ ಹರಿಕೃಷ್ಣ. ಅದಕ್ಕೂ ಮೀರಿ ದಿನದಿನಕ್ಕೂ ಸಂಗೀತ ನಿರ್ದೇಶಕರಾಗಿ ಕನ್ನಡದಲ್ಲಿ ಟಾಪ್ ಟು 'ಟಾಪ್ 1' ಗೆ ಏರುತ್ತಿರುವ ವಿ ಹರಿಕೃಷ್ಣ ಅವರನ್ನು ಬಾಳ ಸಂಗಾತಿಯಾಗಿ ಪಡೆದ ಧನ್ಯಲಕ್ಷ್ಮೀಯೂ ಹೌದು.

  ಕನ್ನಡ ಸಿನಿಪ್ರೇಕ್ಷಕರಿಂದ ಉತ್ತಮ ಗಾಯಕಿ ಎಂದು ಗುರುತಿಸಿಕೊಂಡಿರುವ ಇವರು 2007-08ರಲ್ಲಿ ಇಂತಿ ನಿನ್ನ ಪ್ರೀತಿಯ ಚಿತ್ರದ ಮಧುವನ ಕರೆದರೆ... ಹಾಡಿಗೆ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇಂತಹ ಗಾಯಕಿ, ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರು ಒನ್ ಇಂಡಿಯಾ ಕನ್ನಡದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ..

  * ನಿಮ್ಮ ಹುಟ್ಟೂರು, ಕುಟುಂಬ ಹಾಗೂ ಹಿನ್ನಲೆ ಬಗ್ಗೆ ಹೇಳಿ...

  ಹುಟ್ಟಿದ್ದು, ಬೆಳೆದಿದ್ದು ಹಾಗೂ ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಅಪ್ಪ ಗಾನಭೂಷಣಂ ಎಸ್ ರಾಮಸ್ವಾಮಿ ಹಾಗೂ ಅಮ್ಮ ಭಾನುಮತಿ. ಪತಿ ಸಂಗೀತ ನಿರ್ದೇಶಕರಾಗಿರುವ ವಿ ಹರಿಕೃಷ್ಣ.

  ಆದರೆ ನನಗೆ ಸಂಗೀತದ ನಂಟು ಚಿಕ್ಕಂದಿನಿಂದಲೂ ಇತ್ತು. ಅದು ಹೇಗೆಂದರೆ, ನಮ್ಮ ಅಪ್ಪ ಗಾನಭೂಷಣಂ ಎಸ್ ರಾಮಸ್ವಾಮಿಯವರು ಖ್ಯಾತ ಸಂಗೀತ ವಿದ್ವಾಂಸರು (ಹಾಡುಗಾರಿಕೆ). ಅವರು ಜಗದ್ವಿಖ್ಯಾತ ಸಂಗೀತ ವಿದ್ವಾಂಸರಾದ ಶಮಂಗುಡಿ ಶ್ರೀನಿವಾಸ್ ಅಯ್ಯರ್ ಅವರ ಶಿಷ್ಯರು. ನನ್ನಮ್ಮ ಜಿಎಸ್ ಭಾನುಮತಿಯವರು ಖ್ಯಾತ ವೀಣಾ ವಾದಕಿ. ಅವರು ವೀಣೆಯಲ್ಲಿ (ಕರ್ನಾಟಿಕ್) ವಿದ್ವತ್ ಮಾಡಿದ್ದಾರೆ. ಇನ್ನು ನನ್ನ ಚಿಕ್ಕತಾತ ಸೌತ್ ಇಂಡಿಯಾದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಜಿಕೆ ವೆಂಕಟೇಶ್.

  ನಾನು ಸ್ಕೂಲ್ ರಜಾ ಇರುವಾಗ ತಾತನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಚಿಕ್ಕತಾತ ಜಿಕೆ ವೆಂಕಟೇಶ್ ಜೊತೆ ಕಳೆಯುವ ಹೇರಳ ಅವಕಾಶ ನನಗೆ ಸಿಗುತ್ತಿತ್ತು.ಇನ್ನು, ನಮ್ಮ ಮನೆಯಲ್ಲೂ ಅಷ್ಟೇ, ಸಂಗೀತಕ್ಕೆ ಸಾಕಷ್ಟು ಸ್ಥಾನಮಾನವಿತ್ತು. ಕೀರ್ತನೆ, ಕರ್ನಾಟಿಕ್ ಸಂಗೀತ ಮುಂತಾದವುಗಳಲ್ಲಿ ಎಲ್ಲರಿಗೂ ಆಸಕ್ತಿ. ಸಂಗೀತ ಸಭೆ, ಸಮಾರಂಭಗಳಿಗೆ ಮನೆಯವರೊಂದಿಗೆ ನಾನೂ ಹೋಗುತ್ತಿದ್ದೆ.

  ಚಿಕ್ಕಂದಿನಲ್ಲೇ ನಾನು ಸಂಗೀತಾಭ್ಯಾಸ ಪ್ರಾರಂಭಿಸಿದೆ. ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿಯನ್ನೂ ಪಡೆದಿದ್ದೇನೆ. ಅಷ್ಟಕ್ಕೇ ನಿಲ್ಲಿಸದೇ ಕಲಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ.

  * ನಿಮಗೂ ಹಿನ್ನೆಲೆ ಗಾಯನಕ್ಕೂ ನಂಟಾಗಿದ್ದು ಹೇಗೆ, ಯಾವಾಗ?

  ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಇಳೆಯರಾಜಾ ಅವರ ಸಂಗೀತ ನಿರ್ದೇಶನದ ಕೆಲಸ ನಡೆಯುತ್ತಿತ್ತು. ಅಲ್ಲಿಗೆ ನನ್ನನ್ನು ಕೋರಸ್ ಹಾಡಲು ಕರೆಸಿಕೊಳ್ಳುತ್ತಿದ್ದರು. ಈಗಾಗಲೇ ನಾನು ಗಾಯಕಿಯಾಗಿ ಗುರುತಿಸಿಕೊಂಡಿದ್ದೇನೆ, ಇಂದು ನಾನು ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ ಎಂದರೆ ಅದು ಅಂದು ನಾನು ಇಳೆಯರಾಜಾರಲ್ಲಿ ಕಂಡ ಸಂಗೀತದ ಆಳ-ಅಗಲಗಳೇ ಕಾರಣ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/music/vani-harikrishna-kannada-singer-music-director-talks-069346.html">Next »</a></li></ul>
  English summary
  Singer, recently turned Music Director Vani Harikrishna is a popular name in Kannda film Industry. The reason is, she sung many songs in movies and awarded by State Award in 2007-08 for movie 'Inthi ninna Preethiya'. And also, she is wife of famous music director V Harikrishna. Here is the Interview to read..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X