ಬೆಂಗಳೂರಿನಲ್ಲಿ ಶ್ರೇಯಾ ಆಹಾ ಎಂಥ ಆ ಕ್ಷಣ!

ಶ್ರೇಯಾ ಘೋಷಾಲ್ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾದಾಗಿನಿಂದ ಹಾಡಿರುವ ಹಾಡುಗಳ ಕಿರುಪರಿಚಯ ಕೂಡ ಫಿಲ್ಮಿ ಶೈಲಿಯಲ್ಲಿ ಅಲ್ಲಿ ಬಿತ್ತರವಾಗಲಿದೆ. ಶ್ರೇಯಾ ಹಿನ್ನೆಲೆ ಗಾಯಕಿಯಾಗಿ ಪರಿಚಯವಾದಂದಿನಿಂದ ಇಂದಿನವರೆಗಿನ ಸೂಪರ್ ಹಿಟ್ ಹಾಡುಗಳು ಅಂದು ಲೈವ್ ಆಗಿ ಮೂಡಿಬಂದು ಶ್ರೇಯಾ ಅಭಿಮಾನಿಗಳಿಗೆ ಸಂಗೀತ ರಸದೌತಣ ಸಿಗಲಿದೆ.
ಗಾಯಕಿ ಶ್ರೇಯಾ ಘೋಷಾಲ್ ಕೇವಲ ಹಿಂದಿ ಚಿತ್ರಗೀತೆಗೇ ಸೀಮಿತವಾಗದೇ, ಕನ್ನಡ, ಬೆಂಗಾಲಿ, ಅಸ್ಸಾಂ, ಮಲಯಾಳಂ, ಮರಾಠಿ, ಓರಿಯಾ, ಗುಜರಾತಿ, ತಮಿಳು, ಮತ್ತು ತೆಲುಗು ಹೀಗೆ ಭಾರತದ ಇತರ ಸಾಕಷ್ಟು ಭಾಷೆಗಳ ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ. ಇಂತಹ ಶ್ರೇಯಾ ಘೋಷಾಲ್ ಅವರ ಮೇ 12ರ ಸಂಗೀತ ಸಂಜೆಗೆ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಗಲಿದೆ. ಶ್ರೀಹರಿ ಮತ್ತು ರಾಜಶೇಖರ್ ಬ್ರಿಗಾದೆ ಈ ಸಂಗೀತ ಸಂಜೆಯ ರೂವಾರಿಗಳು. (ಒನ್ ಇಂಡಿಯಾ ಕನ್ನಡ)
More from Filmibeat
English summary
Leading Singer Shreya Goshal's Musical Evening One of the prolific singers of this sub continent with melody at the peak Shreya Goshal musical evening is on 12th of May at Bengaluru Palace grounds.


Click it and Unblock the Notifications











