»   » ಹೊಸ ಬಾಳಿನ ಹೊಸಿಲಲಿ ಗಾಯಕಿ ಶ್ರೇಯಾ ಘೋಷಾಲ್

ಹೊಸ ಬಾಳಿನ ಹೊಸಿಲಲಿ ಗಾಯಕಿ ಶ್ರೇಯಾ ಘೋಷಾಲ್

Posted By:
Subscribe to Filmibeat Kannada

ತನ್ನ ಸುಮಧುರ ಕಂಠದಿಂದ ಕೇಳುಗರ ಮನಗೆದ್ದ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್. ಇವರ ಕಂಠಸಿರಿಗೆ ಮಾರುಹೋಗದವರೇ ಇಲ್ಲ. ಕೇವಲ ಅವರ ಕಂಠವಷ್ಟೇ ಅಲ್ಲ ಅವರ ಕುಡಿ ನೋಟವೂ ಅಷ್ಟೇ ಸೊಗಸು. ಸದ್ದುಗದ್ದಲವಿಲ್ಲದಂತೆ ಗುರುವಾರ (ಫೆ.5) ಶ್ರೇಯಾ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಈ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಬೆಂಕಿ ಬಿದ್ದಂತಾಗಿದೆ. ಶ್ರೇಯಾ ಅವರು ಈಗಾಗಲೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಭಾರಿ ತುಮುಲಗಳನ್ನು ಎಬ್ಬಿಸಿತ್ತು. ತಮ್ಮ ಫೇಸ್ ಬುಕ್ ನಲ್ಲಿ ಸ್ವತಃ ಅವರೇ ತಮ್ಮ ಮದುವೆ ಸುದ್ದಿಯನ್ನು ಪ್ರಕಟಿಸುವ ಮೂಲಕ ಎಲ್ಲಾ ಅಂತೆಕಂತೆಗೆ ತೆರೆ ಎಳೆದಿದ್ದಾರೆ. [ಗಾಯಕಿ ಶ್ರೇಯಾಗೆ ಇಂದು ಉಲ್ಲಾಸದ ಹೂ ಮಳೆ]


Post by Shreya Ghoshal.

ಶ್ರೇಯಾ ಅವರ ಮದುವೆ ತೀರಾ ಖಾಸಗಿಯಾಗಿದ್ದು ಕೇವಲ ಆಪ್ತೇಷ್ಟರ ಸಮ್ಮುಖದಲ್ಲಿ ಮದುವೆ ನಡೆದಿದೆ. ಇಷ್ಟಕ್ಕೂ ಅವರು ಕೈಹಿಡಿಯುತ್ತಿರುವ ಹುಡುಗ ಯಾರು? ಏನು ಮಾಡುತ್ತಿದ್ದಾರೆ? ಇದು ಲವ್ ಮ್ಯಾರೇಜಾ ಅಥವಾ ಗುರುಹಿರಿಯರು ನಿಶ್ವಯಿಸಿದ್ದಾ?

ಉದ್ಯಮಿ ಕೈಹಿಡಿದ ಶ್ರೇಯಾ ಘೋಷಾಲ್

ಶ್ರೇಯಾ ಘೋಷಾಲ್ ಅವರು ಕೈಹಿಡಿದಿರುವ ಹುಡುಗ ಉದ್ಯಮಿ ಶೈಲಾದಿತ್ಯ ಮುಖ್ಯೋಪಾಧ್ಯಾಯ. ಇವರು ರಾಸಿಲೆಂಟ್ ಟೆಕ್ನಾಲಜಿ ಎಂಬ ಸಂಸ್ಥೆಯ ಸಂಸ್ಥಾಪಕ. ಶೈಲಾದಿತ್ಯ ಅವರ ಬಾಳಸಂಗಾತಿಯಾಗಿದ್ದಾರೆ ಶ್ರೇಯಾ.


ಮಾಧ್ಯಮಗಳನ್ನೂ ದೂರ ಇಟ್ಟ ಶ್ರೇಯಾ

ಮಾಧ್ಯಮ ಸ್ನೇಹಿ ಎನ್ನಿಸಿಕೊಂಡ ಶ್ರೇಯಾ ತನ್ನ ಮದುವೆ ವಿಚಾರದಲ್ಲಿ ಮಾತ್ರ ಮಾಧ್ಯಮಗಳನ್ನು ದೂರ ಇಟ್ಟಿದ್ದು ಯಾಕೆ ಎಂಬ ಪ್ರಶ್ನೆ ಮಾತ್ರ ಪ್ರಶ್ನಾರ್ಥಕ ಚಿನ್ಹೆಯಾಗಿಯೇ ಉಳಿದಿದೆ. ಆದರೆ ತನ್ನ ಮದುವೆ ವಿಚಾರವನ್ನು ಕೆಲದಿನಗಳ ಹಿಂದಷ್ಟೇ ಟ್ವೀಟ್ ಮಾಡಿ ಸುಳಿವು ನೀಡಿದ್ದರು.


ಏನೋ ಒಂಥರಾ ಈ ಪ್ರೀತಿಯು ಶುರುವಾದ ಆನಂತರ

ಏನೋ ಒಂಥರಾ ಏನೋ ಒಂಥರಾ ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರ (ಹುಡುಗಾಟ)...ಓ ಗುಣವಂತ! ನೀನೆಂದು ನನ ಸ್ವಂತ(ಜೊತೆ ಜೊತೆಯಲಿ)... ಆಹಾ ಎಂಥ ಆ ಕ್ಷಣ (ಆಕಾಶ್)...ಉಲ್ಲಾಸ ಹೂ ಮಳೆ(ಚೆಲುವಿನ ಚಿತ್ತಾರ)...ನಿನ್ನ ನೋಡಲೆಂತೋ ಮಾತನಾಡಲೆಂತೊ (ಮುಸ್ಸಂಜೆ ಮಾತು)...ಹೀಗೆ ಶ್ರೇಯಾ ಘೋಷಾಲ್ ಹಾಡಿದ ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.


ಮರುಳುಗಾಡಿನ ಕೋಗಿಲೆ ಹಾಡಿದ್ದು ಬಹಳಷ್ಟು

ಹುಟ್ಟಿದ್ದು ಬೆಂಗಾಲಿ ಬ್ರಾಹ್ಮಣ ಮನೆತನದಲ್ಲಿ. ಬೆಳೆದದ್ದು ರಾಜಸ್ತಾನದ ಮರುಳುಗಾಡಿನಲ್ಲಿ. ಈ ಮರುಳುಗಾಡಿನ ಕೋಗಿಲೆ ಹಾಡಿದ್ದು ಕನ್ನಡ ಸೇರಿದಂತೆ ಬೆಂಗಾಳಿ,ಮಲೆಯಾಳಂ, ಮರಾಠಿ, ಪಂಜಾಬಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ.


ಕನ್ನಡಕ್ಕೆ ಒಗ್ಗಿ ಹೋದ ಗಾಯಕಿ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪರಿಚಯವಾಗಿ ನಂತರ ಹಿಂತಿರುಗಿ ನೋಡಲೇ ಇಲ್ಲ. ಕನ್ನಡದಲ್ಲಿ ಸವಿಸವಿ ನೆನಪು, ಮಿಲನ, ಹೊಂಗನಸು, ಬೊಂಬಾಟ್, ಅರ್ಜುನ್, ಮಾದೇಶ, ಮೊಗ್ಗಿನ ಮನಸು, ವಂಶಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದಾರೆ. ಕನ್ನಡಕ್ಕೆ ಬಂದ ಈ ಕೋಗಿಲೆಯ ಕಂಠ ಕನ್ನಡ ಚಿತ್ರರಂಗಕ್ಕೆ ಒಗ್ಗಿ ಹೋಗಿರುವುದು ಸುಳ್ಳಲ್ಲ.


ಹೊಸ ಬಾಳಿನ ಹೊಸಿಲಲಿ ನಿಂತಿರುವ ನವ ಜೋಡಿ

ಸದ್ಯಕ್ಕೆ ನಾವು ನೀವು ಮಾಡಬೇಕಾದ ಕೆಲಸ ಎಂದರೆ ಹೊಸ ಬಾಳಿನ ಹೊಸಿಲಲಿ ನಿಂತಿರುವ ನವ ಜೋಡಿಗೆ ಶುಭವಾಗಲಿ. ಮದುವೆ ಬಳಿಕವೂ ಶ್ರೇಯಾ ಕನ್ನಡದ ಮತ್ತಷ್ಟು ಹಾಡುಗಳನ್ನು ಹಾಡಲಿ ಎಂದು ಆಶಿಸೋಣ.


English summary
Playback singer Sherya Ghoshal is all set to tie the knot on 5th, Thursday. Entrepreneur Shiladitya Mukhopadhyaya, founder of Rasilant Technologies, is the lucky guy who will take the matrimonial vows with the gorgeous singer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada