twitter
    For Quick Alerts
    ALLOW NOTIFICATIONS  
    For Daily Alerts

    ವಾಣಿ ಜಯರಾಂ ಹಾಡಿದ ಮೊದಲ ಹಾಗೂ ಕೊನೆಯ ಕನ್ನಡ ಹಾಡು ಯಾವುದು ಬಲ್ಲಿರೆ?

    By ಫಿಲ್ಮಿಬೀಟ್ ಡೆಸ್ಕ್
    |

    ಖ್ಯಾತ ಗಾಯಕಿ ವಾಣಿ ಜಯರಾಂ ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

    ಕನ್ನಡ ಸೇರಿದಂತೆ 19 ಭಾಷೆಗಳಲ್ಲಿ ಸುಮಾರು 10,000 ಕ್ಕೂ ಹೆಚ್ಚು ಹಾಡುಗಳನ್ನು ವಾಣಿ ಜಯರಾಂ ಹಾಡಿದ್ದಾರೆ. ಕನ್ನಡದಲ್ಲಿಯೂ ಸಹ ವಾಣಿ ಜಯರಾಂ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. 1970 ರ ದಶಕದಿಂದಲೂ ವಾಣಿ ಜಯರಾಂ ಅವರು ಕನ್ನಡದ ಹಾಡುಗಳನ್ನು ಹಾಡುತ್ತಲೇ ಬಂದಿದ್ದು, ಕನ್ನಡದ ಗಾಯಕಿಯೇ ಆಗಿಬಿಟ್ಟಿದ್ದಾರೆ.

    ಕನ್ನಡದ ಹಲವಾರು ನಟಿಯರಿಗೆ ಧ್ವನಿ ನೀಡಿರುವ ವಾಣಿ ಜಯರಾಂ ಅವರು, ಕನ್ನಡದ ಮಾತ್ರವೇ ಅಲ್ಲದೆ ಭಾರತದ ಖ್ಯಾತ ನಾಮ ಹಾಡುಗಾರರೊಟ್ಟಿಗೆ ಯುಗಳ ಗೀತೆಗಳನ್ನು ಹಾಡಿದ್ದಾರೆ. ತಮ್ಮ ವೃತ್ತಿ ಬದುಕಿನ ಆರಂಭದಲ್ಲಿಯೇ ವಾಣಿ ಜಯರಾಂ ಅವರು ಕನ್ನಡ ಹಾಡುಗಳನ್ನು ಹಾಡುತ್ತಾ ಬಂದಿದ್ದಾರೆ.

    ವಾಣಿ ಜಯರಾಂ ಹಾಡಿದ ಮೊದಲ ಕನ್ನಡ ಹಾಡು

    ವಾಣಿ ಜಯರಾಂ ಹಾಡಿದ ಮೊದಲ ಕನ್ನಡ ಹಾಡು

    1973 ರಲ್ಲಿ ಮೊದಲ ಬಾರಗೆ ವಾಣಿ ಜಯರಾಂ ಅವರು ಕನ್ನಡ ಸಿನಿಮಾಕ್ಕಾಗಿ ಕನ್ನಡ ಹಾಡೊಂದನ್ನು ಹಾಡಿದರು. ಆ ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ವಾಣಿ ಜಯರಾಂ ಅವರನ್ನು ಕನ್ನಡಕ್ಕೆ ಕರೆತಂದ ಶ್ರೇಯ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರಿಗೆ ಸಲ್ಲಬೇಕು. 1973 ರಲ್ಲಿ ಬಿಡುಗಡೆ ಆದ 'ಕೆಸರಿನ ಕಮಲ' ಹೆಸರಿನ ಸಿನಿಮಾಕ್ಕಾಗಿ ಎರಡು ಕನ್ನಡ ಹಾಡುಗಳನ್ನು ವಾಣಿ ಜಯರಾಂ ಹಾಡಿದರು. ಅದೇ ಸಮಯದಲ್ಲಿಯೇ ಅವರು ತೆಲುಗು, ತಮಿಳು ಭಾಷೆಗಳಲ್ಲಿಯೂ ಹಾಡಲು ಆರಂಭಿಸಿದ್ದರು. ಹಿಂದಿಯಲ್ಲಿ ತುಸು ತಿಂಗಳ ಮುಂಚೆಯಷ್ಟೆ ಹಾಡು ಹಾಡಿದ್ದರು.

    ವಾಣಿ ಜಯರಾಂ ಹಾಡಿದ ಕೊನೆಯ ಕನ್ನಡ ಹಾಡು

    ವಾಣಿ ಜಯರಾಂ ಹಾಡಿದ ಕೊನೆಯ ಕನ್ನಡ ಹಾಡು

    ಇನ್ನು ವಾಣಿ ಜಯರಾಂ ಹಾಡಿದ ಕೊನೆಯ ಕನ್ನಡ ಹಾಡನ್ನು ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ವಾಣಿ ಜಯರಾಂ ಅವರು ಹಾಡಿದ ಕೊನೆಯ ಕನ್ನಡ ಸಿನಿಮಾ 'ನೀಲಾ'. ಟಿಎಸ್ ನಾಗಾಭರಣ ನಿರ್ದೇಶನದ ಈ ಸಿನಿಮಾ ಹಲವರ ಫೇವರೆಟ್. ಈ ಸಿನಿಮಾದ ಹಾಡುಗಳಂತೂ ಸೂಪರ್ ಹಿಟ್ ಆಗಿದ್ದವು. ಜನಪದದ ಛಾಯೆ ಇದ್ದ ಈ ಸಿನಿಮಾದ ಹಾಡುಗಳಿಗೆ ಪ್ರತ್ಯೇಕ ಕೇಳುಗವರ್ಗವೇ ಇದೆ. 'ನೀಲ' ಸಿನಿಮಾದ ನಾಲ್ಕು ಹಾಡುಗಳನ್ನು ವಾಣಿ ಜಯರಾಂ ಹಾಡಿದ್ದರು.

    ವಾಣಿ ಜಯರಾಂ ಹಾಡಿರುವ ಕೊನೆಯ ಹಾಡು

    ವಾಣಿ ಜಯರಾಂ ಹಾಡಿರುವ ಕೊನೆಯ ಹಾಡು

    ಇನ್ನು ವಾಣಿ ಜಯರಾಂ ತಮ್ಮ ವೃತ್ತಿ ಬದುಕಿನಲ್ಲಿ ಹಾಡಿದ ಕೊನೆಯ ಹಾಡೆಂದರೆ ಮಲಯಾಳಂನ 'ಮಾಧವೀಯಂ' ಸಿನಿಮಾದ್ದು. ಈ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು. ಇನ್ನು ತೆಲುಗಿನಲ್ಲಿ 2014 ರಲ್ಲಿ ಬಿಡುಗಡೆ ಆದ 'ಪ್ರೇಮಾಲಯಂ' ಸಿನಿಮಾದಲ್ಲಿ ಕೊನೆಯದಾಗಿ ಹಾಡಿದ್ದರು. ಆ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು. ತಮಿಳಿನಲ್ಲಿ 2019 ರಲ್ಲಿ ಬಿಡುಗಡೆ ಆದ ಎಲ್‌ಕೆಜಿ ಸಿನಿಮಾದಲ್ಲಿ ಎರಡು ಹಾಡನ್ನು ವಾಣಿ ಜಯರಾಂ ಹಾಡಿದ್ದರು. ಇದುವೇ ಅವರ ಕೊನೆಯ ತಮಿಳು ಹಾಡಾಗಿತ್ತು. ಹಿಂದಿಯಲ್ಲಿ ಅವರು 2005 ರಿಂದಲೂ ಹಾಡಿಲ್ಲ.

    ಮೋದಿ ಸೇರಿ ಹಲವರಿಂದ ಸಂತಾಪ

    ಮೋದಿ ಸೇರಿ ಹಲವರಿಂದ ಸಂತಾಪ

    ಕನ್ನಡದಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ವಾಣಿ ಜಯರಾಂ ಅವರು ಹಾಡಿದ್ದಾರೆ. ಕನ್ನಡ ಮಾತ್ರವೇ ಹಲವು ಭಾಷೆಗಳಲ್ಲಿ ಕೆಲವು ಅತ್ಯುತ್ತಮ ಹಾಡುಗಳನ್ನು ವಾಣಿ ಜಯರಾಂ ಅವರು ನೀಡಿದ್ದಾರೆ. ಗಾಯನಕ್ಕಾಗಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ ವಾಣಿ ಜಯರಾಂ. ಖ್ಯಾತ ಗಾಯಕಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಖ್ಯಾತನಾಮ ರಾಜಕಾರಣಿಗಳು, ಸಿನಿಮಾ ತಾರೆಯರು, ಸಂಗೀತ ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.

    English summary
    Information about singer Vani Jairam's first and last Kannada song. Singer Vani Jairam's sand more than 10,000 songs in 19 languages.
    Saturday, February 4, 2023, 20:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X