Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರಿನ ನಂಬರ್‌ಗೆ 28 ಲಕ್ಷ ಕೊಟ್ಟ ಗಾಯಕ! ನಂಬರ್ ಯಾವುದು?
ಸೆಲೆಬ್ರಿಟಿಗಳಿಗೆ ಕಾರಿನ ಮೋಹ ತೀರ ಸಾಮಾನ್ಯ. ಹಲವು ಸಿನಿಮಾ ಸೆಲೆಬ್ರಿಟಿಗಳು ಕೋಟ್ಯಂತರ ಬೆಲೆಯ ಕಾರಿನಲ್ಲಿ ಓಡಾಡುತ್ತಾರೆ. ಆದರೆ ಸೆಲೆಬ್ರಿಟಿ ಗಾಯಕರೊಬ್ಬರು ತನ್ನ ಕಾರಿನ ನಂಬರ್‌ಗಾಗಿ 28 ಲಕ್ಷ ರುಪಾಯಿ ನೀಡಿದ್ದಾರೆ.
ಹಿಂದಿ, ಪಂಜಾಬಿ ಹಾಡುಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ಯೋ ಯೋ ಹನಿ ಸಿಂಗ್ ಹೊಸ ಕಾರೊಂದನ್ನು ಖರೀದಿಸಿದ್ದರು. ಆ ಕಾರಿನ ನಂಬರ್‌ಗಾಗಿ 28 ಲಕ್ಷ ರುಪಾಯಿ ಹಣ ವ್ಯಯಿಸಿದ್ದಾರೆ.
ಇಪ್ಪಟಂ
ಗ್ರಾಮದಲ್ಲಿ
ಅಲ್ಲೋಲ-ಕಲ್ಲೋಲ
ಸೃಷ್ಟಿಸಿದ
ಪವನ್
ಕಲ್ಯಾಣ್!
ಕಾರಿನ
ಮೇಲೆ
ಕೂತು
ಎಂಟ್ರಿ!
ಹನಿ ಸಿಂಗ್ ಆಡಿ ಸಂಸ್ಥೆಯ R8 ಕಾರನ್ನು ಖರೀದಿಸಿದ್ದರು. ಕಾರಿಗೂ ಅದೇ ಸಂಖ್ಯೆ ಬೇಕೆಂದು ಪಟ್ಟು ಹಿಡಿದು R8 ನಂಬರ್ ಅನ್ನೇ ಹಾಕಿಸಿದ್ದಾರೆ. ಈ ನಂಬರ್ ಅನ್ನು ಮಹಾರಾಷ್ಟ್ರದಿಂದ ಖರೀದಿ ಮಾಡಿದ್ದಾರೆ ಯೋ ಯೋ ಹನಿ ಸಿಂಗ್. ಈ ವಿಷಯವನ್ನು ಸ್ವತಃ ಯೋ ಯೋ ಹನಿ ಸಿಂಗ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಒಂದು ಸಮಯದಲ್ಲಿ ನನಗೆ ಐಶಾರಾಮಿ ಕಾರುಗಳ ಬಹಳ ಹುಚ್ಚಿತ್ತು. ಆಗ ಕಾರು ಖರೀದಿಸುವುದು ಮಾತ್ರವಲ್ಲ ಅದಕ್ಕೆ ಭಿನ್ನವಾಗಿ ನಂಬರ್ ಹಾಕಿಸುವ ಅಭ್ಯಾಸವೂ ಇತ್ತು. ಆಗಲೇ R8 ಕಾರಿಗೆ R8 ಎಂದೇ ನಂಬರ್ ಹಾಕಿಸಿದ್ದೆ. ಅದಕ್ಕಾಗಿ 28 ಲಕ್ಷ ರುಪಾಯಿ ಖರ್ಚು ಮಾಡಿದ್ದೆ ಎಂದಿದ್ದಾರೆ ಹನಿ ಸಿಂಗ್.
ಆಡಿ R8 ಕಾರಿನ ಬೆಲೆ ಭಾರತದಲ್ಲಿ 2.76 ಕೋಟಿಯಿಂದ ಪ್ರಾರಂಭವಾಗುತ್ತದೆ. 3.80 ಕೋಟಿಯ ವೆರಗೆ ಎಕ್ಸ್ ಶೋರೂಂ ಬೆಲೆ ಇದೆ. ಆನ್ ರೋಡ್ ಬೆಲೆ ಇನ್ನೂ ಒಂದು ಕೋಟಿ ಹೆಚ್ಚಾಗುತ್ತದೆ. ಭಾರತದಲ್ಲಿ ಆಡಿ R8 ನ ಬೇಸ್ ಮಾಡೆಲ್ ಕಾರು ಸಹ 3.50 ಕೋಟಿ ವೆಚ್ಚವಾಗುತ್ತದೆ.
ಹನಿ ಸಿಂಗ್ ಬಳಿ ಸುಮಾರು 16 ಕೋಟಿ ಮೌಲ್ಯದ ಕಾರುಗಳ ಕಲೆಕ್ಷನ್ ಇದೆ. ಆಡಿ R8, ರೋಲ್ಸ್ ರಾಯ್ಸ್ ಪ್ಯಾಂಟಮ್, ಆಡಿ ಕ್ಯು7, ಬಿಎಂಡಬ್ಲು 520ಡಿ, ಜಾಗ್ವಾರ್ ಎಕ್ಸ್‌ಜೆಎಲ್ ಸೇರಿದಂತೆ ಇನ್ನೂ ಕೆಲವು ಕಾರುಗಳು ಅವರ ಬಳಿ ಇವೆ.

ಪಂಜಾಬಿ ಆಲ್ಬಂ ಹಾಡುಗಳ ಮೂಲಕ ರ್ಯಾಪರ್ ಆಗಿ ಪದಾರ್ಪಣೆ ಮಾಡಿದ ಯೋ ಯೋ ಹನಿ ಸಿಂಗ್ ಆ ಬಳಿಕ ಹಿಂದಿ ಆಲ್ಬಂ ಹಾಡುಗಳು, ಸಿನಿಮಾ ಹಾಡುಗಳನ್ನು ಹಾಡಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಅವರ ಶೋಗಳು ನಡೆಯುತ್ತಲೇ ಇರುತ್ತವೆ.