For Quick Alerts
  ALLOW NOTIFICATIONS  
  For Daily Alerts

  ಸೇನಾಧಿಕಾರಿ ಆಗುತ್ತಿದ್ದಾರೆ ನಟ ಸೋನು ಸೂದ್!

  |

  ನಟ ಸೋನು ಸೂದ್ ಸೇನಾಧಿಕಾರಿ ಆಗುತ್ತಿದ್ದಾರೆ. ಹಾಗೆಂದು ಸಿನಿಮಾ ಬಿಟ್ಟು ಸೋನು ಸೂದ್ ಸೈನ್ಯ ಸೇರುತ್ತಿದ್ದಾರೆ ಎನ್ನುವ ಹಾಗಿಲ್ಲ, ಸೇನಾಧಿಕಾರಿ ಧಿರಿಸು ತೊಡುತ್ತಿರುವುದು ಒಂದು ಹಾಡಿಗಾಗಿ ಮಾತ್ರ.

  ಗಾಯಕಿ ಸುನಂದಾ ಶರ್ಮಾ 'ಪಾಗಲ್ ನಹಿ ಹೋನಾ' ಎಂಬ ಆಲ್ಬಂ ಬಿಡುಗಡೆ ಮಾಡಲಿದ್ದು, ಈ ಆಲ್ಬಂ ನಲ್ಲಿ ಸೋನು ಸೂನ್ ಅಭಿನಯಿಸಿದ್ದಾರೆ.

  'ಪಾಗಲ್ ನಹಿ ಹೋನಾ' ದಲ್ಲಿ ನಟ ಸೋನು ಸೂದ್ ಸೈನ್ಯಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಸೋನು ಸೂದ್‌ ಗೆ ಇದು ಮೊದಲ ವಿಡಿಯೋ ಆಲ್ಬಂ ಆಗಿದೆ.

  ಸೈನ್ಯಾಧಿಕಾರಿ ಹಾಗೂ ಆತನ ಪ್ರೇಯಸಿ ನಡುವೆ ನಡೆವ ಭಾವುಕ ಸನ್ನಿವೇಶಗಳನ್ನು ಈ ಹಾಡು ಕಟ್ಟಿಕೊಡಲಿದೆ. 'ಹಾಡಿನ ಕಾನ್ಸೆಪ್ಟ್ ಕೇಳಿದ ಕೂಡಲೇ ನನಗೆ ಇಷ್ಟವಾಗಿಬಿಟ್ಟಿತು. ಈ ಹಾಡು ನನ್ನ ಯೋಧ ಗೆಳೆಯರಿಗೆ ಅರ್ಪಣೆ ಎಂದಿದ್ದಾರೆ ಸೋನು ಸೂದ್.

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ನಟ ಸೋನು ಸೂದ್ ನಿಜ ಜೀವನದ ಹೀರೊ ಆಗಿ ಮೇಲೆದ್ದಿದ್ದಾರೆ. ಹಾಗಾಗಿ ಅವರನ್ನೇ ಸೈನ್ಯಾಧಿಕಾರಿಯಂಥಹಾ ಘನವಾದ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ ಗಾಯಕಿ ಸುನಂದಾ.

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದ ಸೋನು ಸೂದ್ ಆವಾಗ ತಮಗೆ ಆದ ಅನುಭವಗಳನ್ನು ಒಟ್ಟು ಮಾಡಿ 'ಐ ಆಮ್ ನಾಟ್ ಮಸೀಹಾ' ಎಂಬ ಪುಸ್ತಕ ಬರೆದಿದ್ದು, ಪುಸ್ತಕವು ಅದ್ಭುತವಾಗಿ ಮಾರಾಟವಾಗುತ್ತಿದೆ.

  ಇತ್ತೀಚೆಗಷ್ಟೆ ಮುಂಬೈ ಮಹಾನಗರ ಪಾಲಿಕೆಯವರು ಸೋನು ಸೂದ್ ಅವರ ಹೋಟೆಲ್‌ಗೆ ನೊಟೀಸ್ ನೀಡಿದ್ದಾರೆ. ಸೋನು ಸೂದ್ ನಿಯಮಬಾಹಿರವಾಗಿ ಕಟ್ಟಡವನ್ನು ಮಾರ್ಪಾಡು ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ನೊಟೀಸ್‌ ಅನ್ನು ಪ್ರಶ್ನಿಸಿ ಸೋನು ಸೂದ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

  English summary
  Actor Sonu Sood acting as army officer in music video. This is his first music video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X