»   » ಕನ್ನಡದ ರಾಕ್ ಸಾಂಗ್ ನಲ್ಲಿ ಐ.ಪಿ.ಎಸ್ ಅಧಿಕಾರಿ ರೂಪ.!

ಕನ್ನಡದ ರಾಕ್ ಸಾಂಗ್ ನಲ್ಲಿ ಐ.ಪಿ.ಎಸ್ ಅಧಿಕಾರಿ ರೂಪ.!

Posted By:
Subscribe to Filmibeat Kannada

ಕನ್ನಡ ರಾಪ್ ಸಿಂಗರ್ ಗಳಲ್ಲಿ ಒಬ್ಬರಾದ ಅಲೋಕ್ ಬಾಬು ರಾಜ್ಯದ ಮಹಿಳಾ ಮಣಿಯರಿಗಾಗಿ ಒಂದು ಹಾಡನ್ನ ಬಿಡುಗಡೆ ಮಾಡಿದ್ದಾರೆ. ಕನ್ನಡದ ಮೊದಲ ರಾಕ್ ಸಾಂಗ್ ಇದಾಗಿದ್ದು, ''ತಾಯಿ ಕನ್ನಡ'' ಎನ್ನುವ ಟೈಟಲ್ ನಲ್ಲಿ ಹಾಡು ನಿರ್ಮಾಣವಾಗಿದೆ.

ಕನ್ನಡವನ್ನ ತಾಯಿಗೆ ಹೋಲಿಕೆ ಮಾಡುತ್ತಾರೆ ಇದೇ ಕಾರಣದಿಂದ ಹೆಚ್ಚಾಗಿ ಮಹಿಳಾ ಸಾಧಕಿಯರನ್ನೇ ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

Srimurali releases Alok Babu's first rock song

ತಾಯಿ ಕನ್ನಡ ಹಾಡನ್ನ ಸುನೀತಾ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಐ.ಪಿ.ಎಸ್ ಅಧಿಕಾರಿ ರೂಪ ಹಾಗೂ ಚಿತ್ರ ಕಲಾವಿದರಾದ ಸುಧಾ ಬೆಳವಾಡಿ, ಸಂಯುಕ್ತ ಹೊರನಾಡು, ಮಯೂರಿ ಮತ್ತು ಆಯುಶಿ ಐಶ್ವರ್ಯ ಹಾಡಿನಲ್ಲಿ ಭಾಗಿಯಾಗಿದ್ದಾರೆ.

ಅಲೋಕ್ ಬಾಬು ಬರೆದು, ಸಂಗೀತ ಸಂಯೋಜನೆ ಮಾಡಿ, ಹಾಡಿರುವ ತಾಯಿ ಕನ್ನಡ ಹಾಡನ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಬಿಡುಗಡೆ ಮಾಡಿದ್ದಾರೆ. ತಾಯಿ ಕನ್ನಡ ಹಾಡಿಗೆ ಬಿಡುಗಡೆಯಾದ ದಿನವೇ ಸಖತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ.

English summary
Srimurali releases Alok Babu's first rock song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X