»   » ಅಭಿಮಾನಿಗಳ ಒತ್ತಡಕ್ಕೆ ಮಣಿದ ಡಿ ಬಾಸ್ 'ದರ್ಶನ್'

ಅಭಿಮಾನಿಗಳ ಒತ್ತಡಕ್ಕೆ ಮಣಿದ ಡಿ ಬಾಸ್ 'ದರ್ಶನ್'

Posted By:
Subscribe to Filmibeat Kannada
Birugaliyondige Video Song : ಫ್ಯಾನ್ಸ್ ಗಾಗಿ ಗಿಫ್ಟ್ ಕೊಟ್ಟ ದರ್ಶನ್ | Filmibeat Kannada

ಅಭಿಮಾನಿಗಳು ಅಂದ್ರೆ 'ಪ್ರಾಣ', ಇಂದು ನಾನು ಏನಿದ್ದರೂ ಅದು ಅಭಿಮಾನಿಗಳಿಂದ ಎಂದು ಸದಾ ಹೇಳುವ ದರ್ಶನ್, ತಮ್ಮ ಅಭಿಮಾನಿಗಳಿಗೆ ಪುಟ್ಟದೊಂದು 'ಗಿಫ್ಟ್' ನೀಡಿದ್ದಾರೆ.

''ಜನರ ಅಭಿಮಾನಕ್ಕೆ ನನ್ನ ಚರ್ಮ ಸುಳಿದು ಚಪ್ಪಲಿ ಮಾಡಿದರೂ ಕಮ್ಮಿನೇ'' ಎಂದಿದ್ದ 'ಚಾಲೆಂಜಿಂಗ್ ಸ್ಟಾರ್', ತಮ್ಮ ಅಭಿಮಾನಿಗಳು ಕೇಳಿದ್ದ ಕೋರಿಕೆಯನ್ನ ಪ್ರೀತಿಯಿಂದ ನೆರವೇರಿಸಿದ್ದಾರೆ. ಹಾಗಾದ್ರೆ ದರ್ಶನ್ ತನ್ನ ಫ್ಯಾನ್ಸ್ ಗೆ ನೀಡಿದ ಉಡುಗೊರೆ ಏನು ಅಂದ್ರಾ.? ಮುಂದೆ ಓದಿ....

ಚಿಕ್ಕ ಗಿಫ್ಟ್ ಗೆ ಫ್ಯಾನ್ಸ್ ಭರ್ಜರಿ 'ರೆಸ್ಪಾನ್ಸ್'

ಹೌದು, ದರ್ಶನ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. 'ತಾರಕ್' ಸಿನಿಮಾ ಬಿಡುಗಡೆಯಾಗಿ 50 ದಿನ ಪೂರೈಸಿದ ಹಿನ್ನಲೆ ಸಿನಿಮಾ ತಂಡಕ್ಕೆ ಅಭಿಮಾನಿಗಳು ವಿಡಿಯೋ ಸಾಂಗ್ ಅನ್ನ ರಿಲೀಸ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ರು. ಇದಕ್ಕೆ ಮಣಿದ 'ಡಿ ಬಾಸ್' ಚಿತ್ರದ ಹಾಡನ್ನ ಬಿಡುಗಡೆ ಮಾಡಿಸಿದ್ದಾರೆ .

'ತಾರಕ್' ಹಾಡಿಗೆ ಸಖತ್ ರೆಸ್ಪಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾದ 'ಬಿರುಗಾಳಿಯೊಂದಿಗೆ' ಹಾಡನ್ನ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲೂ ಈ ಹಾಡು ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ಹಾಡಿನಲ್ಲಿ ಶಾನ್ವಿ ಅಭಿನಯವನ್ನ ನೋಡಿ ಪ್ರೇಕ್ಷಕರು ಫಿದಾ ಆಗಿದ್ರು.

ಪ್ರೇಕ್ಷಕರು ಇಷ್ಟಪಟ್ಟಿರುವ ಹಾಡು

ಬಿರುಗಾಳಿಯೊಂದಿಗೆ ಹಾಡು ಪ್ರೇಕ್ಷಕರ ಮನಸ್ಸನ್ನ ಮೆಚ್ಚಿರೋ ಹಾಡು. ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಕಾಮೆಂಟ್ ಗಳನ್ನ ಪಡೆದುಕೊಂಡಿದೆ. ಜೊತೆಯಲ್ಲೇ ಹಾಡನ್ನ ಅಭಿಮಾನಿಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ.

ಕೆಲವೇ ದಿನಗಳಲ್ಲಿ ನೂರುದಿನ ಪೂರೈಸಲಿರುವ ಚಿತ್ರ

ಐವತ್ತು ದಿನಗಳನ್ನ ಪೂರೈಸಿರುವ 'ತಾರಕ್' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಶತದಿನೋತ್ಸವವನ್ನ ಪೂರೈಸಲಿದೆ. ಇದೇ ಸಂಭ್ರಮದಲ್ಲಿ ದರ್ಶನ್ ರ ಮತ್ತೊಂದು ಸಿನಿಮಾ ಅನೌನ್ಸ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

English summary
Tarak movie song 'Birugaliyondige..' is released. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರದ ಬಿರುಗಾಳಿಯೊಂದಿಗೆ ಹಾಡು ಬಿಡುಗಡೆಯಾಗಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada