»   » ಜು.25ಕ್ಕೆ ವಿನೋದ್ ಪ್ರಭಾಕರ್ 'ಕ್ರ್ಯಾಕ್' ಆಡಿಯೋ ಬಿಡುಗಡೆ

ಜು.25ಕ್ಕೆ ವಿನೋದ್ ಪ್ರಭಾಕರ್ 'ಕ್ರ್ಯಾಕ್' ಆಡಿಯೋ ಬಿಡುಗಡೆ

Posted By: Staff
Subscribe to Filmibeat Kannada

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನ ಡಾ.ರಾಜ್‌ ಕುಮಾರ್ ಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

'ಕ್ರ್ಯಾಕ್' ಚಿತ್ರಕ್ಕೆ ಎಸ್. ಚಿನ್ನ ಮತ್ತು ಡಾ. ಶಮಿತಾ ಮಲ್ನಾಡ್ ರವರು ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾವನ್ನು ಚಿತ್ರ ಸಾಹಿತಿ ಕೆ ರಾಮ್ ನಾರಾಯಣ್ ರವರು ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. 'ಟೈಸನ್' ನಂತರ ರಾಮ ನಾರಾಯಣ್ ಮತ್ತು ವಿನೋದ್ ಪ್ರಭಾಕರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ 'ಕ್ರ್ಯಾಕ್' ಎಂಬುದು ವಿಶೇಷ.

Vinod Prabhakar 'Krack' movie audio will release on july 25th

'ಕ್ರ್ಯಾಕ್' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಆಕಾಂಕ್ಷ ರವರು ಜೊತೆಯಾಗಿ ನಟಿಸಿದ್ದಾರೆ. ಈ ಹಿಂದೆ ಅವರು ದುನಿಯಾ ವಿಜಯ್ ರವರ 'ಆರ್‌ಎಕ್ಸ್ ಸೂರಿ' ಚಿತ್ರದಲ್ಲಿ ನಟಿಸಿದ್ದರು. ಚಿತ್ರವನ್ನು ವಿಜಯ್ ಕುಮಾರ್ ವೈ ಮತ್ತು ಶಂಕರ್ ಇಳಕಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

English summary
Vinod Prabhakar 'Krack' movie audio will release on july 25th. This movie written and directed by Ram Narayan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada