»   » ವಿಡಿಯೋ: 'ಕನ್ನಡ ಕಲಿಯಲೇ' ಅಂತಾವ್ರೆ 'ಜಾನ್ ಜಾನಿ ಜನಾರ್ದನ'

ವಿಡಿಯೋ: 'ಕನ್ನಡ ಕಲಿಯಲೇ' ಅಂತಾವ್ರೆ 'ಜಾನ್ ಜಾನಿ ಜನಾರ್ದನ'

Posted By:
Subscribe to Filmibeat Kannada

ಇಂಗ್ಲೀಷ್ ಮಯವಾದಂತಹ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿಯೇ ಕನ್ನಡದ ಬಗ್ಗೆ ಹಾಡುಗಳನ್ನು ರಚನೆ ಮಾಡೋದು ಬಿಡಿ ಹಾಡೋದು ಬಹಳ ಕಡಿಮೆ. ಅದರಲ್ಲೂ ಇತ್ತೀಚೆಗೆ ಪರ ಭಾಷೆಯ ಗಾಯಕರು ಕನ್ನಡ ಹಾಡನ್ನು ತಪ್ಪು-ತಪ್ಪಾಗಿ ಹಾಡಿ ಕನ್ನಡದ ಕಗ್ಗೊಲೆ ಮಾಡುತ್ತಿರುವುದು ವಿಷಾದಕರ ಸಂಗತಿ.

ಆದರೆ ಬರೀ ಕನ್ನಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವುದಲ್ಲದೇ, ಕನ್ನಡ ಕಲಿಯಿರಿ ಅಂತ ವಿಭಿನ್ನವಾಗಿ ಹೇಳ ಹೊರಟಿದ್ದಾರೆ ನಮ್ಮ ಅಚ್ಚ ಕನ್ನಡದ ಹುಡುಗರಾದ 'ಜಾನ್ ಜಾನಿ ಜನಾರ್ದನ'.[ಮುಂಬೈ ನಿಂದ ನೇರವಾಗಿ ಸ್ಯಾಂಡಲ್ ವುಡ್ ಗೆ ಬಂದ ರೂಪದರ್ಶಿ]

Watch 'John Jaani Janardhan' 'Kannada Kaliyale' video song

ಹೌದು ನಟ ಅಜೇಯ್ ರಾವ್, ನಟ ಕೃಷ್ಣ ಮತ್ತು ನಟ ಲೂಸ್ ಮಾದ ಯೋಗೇಶ್ ಕಾಣಿಸಿಕೊಳ್ಳುತ್ತಿರುವ 'ಜಾನ್ ಜಾನಿ ಜನಾರ್ದನ' ಚಿತ್ರದಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಸಾರುವ 'ಕನ್ನಡ ಕಲಿಯಲೇ' ಎಂಬ ಒಂದೊಳ್ಳೆ ಹಾಡಿದೆ.

ಇವರು ಬರೀ ಕನ್ನಡ ಭಾಷೆಯ ಬಗ್ಗೆ ಹೇಳಿರೋದು ಮಾತ್ರವಲ್ಲದೇ, 'ಲೇ ಕನ್ನಡ ಕಲಿಯಲೇ ಮಂಕೆ' ಅಂತ ಕನ್ನಡ ಬಾರದೇ ಇರುವವರಿಗೆ ಅವಾಜ್ ಬೇರೆ ಹಾಕಿದ್ದಾರೆ. ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಕಲಿಯಲೇಬೇಕು ಅಂತ ಹೇಳುತ್ತಿದ್ದಾರೆ 'ಜಾನ್ ಜಾನಿ ಜನಾರ್ಧನ'.['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]

Watch 'John Jaani Janardhan' 'Kannada Kaliyale' video song

ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮಲಯಾಳಂ ಚಿತ್ರ 'ಅಮರ್ ಅಕ್ಬರ್ ಆಂಟನಿ'ಯ ರೀಮೆಕ್ ಆಗಿರುವ 'ಜಾನ್ ಜಾನಿ ಜನಾರ್ದನ' ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಚಿತ್ರದಲ್ಲಿ ಮುಂಬೈ ಬೆಡಗಿ ಕಾಮ್ನಾ ರಣಾವತ್ ನಾಯಕಿಯಾಗಿ ಮಿಂಚಲಿದ್ದಾರೆ.

ಅಂದಹಾಗೆ ಬರೀ ಪ್ರೀತಿ-ಪ್ರೇಮ ಬಣ್ಣಿಸುವ ಹಾಡುಗಳ ಭರಾಟೆ ಹೆಚ್ಚಾಗಿರುವ ಈ ಕಾಲದಲ್ಲಿ ಇವರು ಮೂರು ಜನ ಸೇರಿಕೊಂಡು 'ಕನ್ನಡ ಕಲಿ ಓ ಮಂಕೆ' ಎನ್ನುತ್ತಿರುವುದು ಕೊಂಚ ವಿಭಿನ್ನವಾಗಿದ್ದು, ಈ ಹಾಡನ್ನು ಕೇಳಬೇಕೆನ್ನಿಸುತ್ತದೆ. ಈ ಹಾಡು ನೀವು ನೋಡಬೇಕೆ ಹಾಗಿದ್ದರೆ ಈ ವಿಡಿಯೋ ನೋಡಿ..

English summary
Watch Kannada Kaliyale' full video song from Kannada Movie 'John Jaani Janardhan'. Starring Kannada Actor Ajay Rao, Kannada Actor Yogesh, Kannada Actor Krishna, Kannada Actress Malashri in the lead role. Music Composed by Arjun Janya. Directed by Guru Deshpande.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada