»   »  ಗಾಯಕನಾಗಿ ಬದಲಾದ ನಾಯಕ ಅನಿರುದ್ಧ್!

ಗಾಯಕನಾಗಿ ಬದಲಾದ ನಾಯಕ ಅನಿರುದ್ಧ್!

Subscribe to Filmibeat Kannada
ನಾಯಕ ನಟ ಅನಿರುದ್ಧ್ ಈಗ ಗಾಯಕರಾಗಿ ಬದಲಾಗಿದ್ದಾರೆ! ಗಾಯಕಿ ಚೈತ್ರಾ ಅವರೊಂದಿಗೆ ಅನಿರುದ್ಧ್ 'ರಂಗ ವಿಠಲ' ಎಂಬ ಹಾಡನ್ನು ಹಾಡಿದ್ದಾರೆ. ಪ್ರೇಮ್ ಅಭಿನಯದ 'ಗೌತಮ್' ಚಿತ್ರಕ್ಕಾಗಿ ಅನಿರುದ್ಧ್ ಈ ಸಾಹಸಕ್ಕೆ ಕೈಹಾಕಿರುವುದು ವಿಶೇಷ.

ನಿರ್ದೆಶಕ ದಿನೇಶ್ ಬಾಬು ಅವರ 'ಚೈತ್ರ' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಅನಿರುದ್ಧ ಬೆಳ್ಳಿತೆರೆಯಲ್ಲಿ ಆರಕ್ಕೇರಲಿಲ್ಲ.ನಂತರ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಬಂದ 'ತುಂಟಾಟ'ಚಿತ್ರ ಪರ್ವಾಗಿಲ್ಲ ಅನ್ನಿಸಿಕೊಂಡಿತ್ತು. ಹಾಸ್ಯನಟ ಕೋಮಲ್ ಕುಮಾರ್ ಜತೆ ನಟಿಸಿದ ಕಾಮಿಡಿ ಎಕ್ಸ್ ಪ್ರೆಸ್ ಚಿತ್ರ ಬಿಡುಗಡೆಯಾಗಿ ಸರಿಸುಮಾರು ಒಂದು ವರ್ಷ ಉರುಳಿಹೋಗಿದೆ.

ಒಬ್ಬ ನಾಯಕ ನಟನಿಗಾಗಿ ಮತ್ತೊಬ್ಬ ನಾಯಕ ಹಾಡುವುದು ಅಪರೂಪ. ಲವ ಕುಶ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗಾಗಿ ಪುನೀತ್ ರಾಜ್ ಕುಮಾರ್ ಹಾಡಿದ್ದರು. ಈಗ ಅನಿರುದ್ಧ ತನ್ನ ಸಹ ನಟ ಪ್ರೇಮ್ ಗಾಗಿ ಹಾಡುತ್ತಿದ್ದಾರೆ ಅಷ್ಟೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೆನಪಿರಲಿ ಪ್ರೇಮ್ ರ ಗೌತಮ್ ಚಿತ್ರದ ಟ್ರೈಲರ್
ಗೌತಮ್ ಎಂಬ ಹಳೆಯ ಸರುಕಿನಲ್ಲಿ ಪ್ರೇಮ್
'ಗೌತಮ್' ಆಗಿ ಬರಲಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada