»   » ನಾನು ಕಾಂಗ್ರೆಸ್ ಪಕ್ಷದ ಅಭಿಮಾನಿ: ನಟಿ ಖುಷ್ಬು

ನಾನು ಕಾಂಗ್ರೆಸ್ ಪಕ್ಷದ ಅಭಿಮಾನಿ: ನಟಿ ಖುಷ್ಬು

Posted By:
Subscribe to Filmibeat Kannada

ಖ್ಯಾತ ಸಿನಿಮಾ ತಾರೆ ಖುಷ್ಬು ರಾಜಕೀಯರಂಗಕ್ಕೆ ಅಡಿಯಿಡಲು ತೀರ್ಮಾನಿಸಿದ್ದಾರೆ. ಹೆಣ್ಣು ಮಕ್ಕಳಿಗೆ ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ ಎಂದು ಹೇಳಿದ ಪರಿಣಾಮ ಆಕೆಯ ವಿರುದ್ಧ ದೇಶದಾದ್ಯಂತ 22 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಇತ್ತೀಚೆಗೆ ಸುಪ್ರೀಂಕೋರ್ಟ್ ಖುಷ್ಬು ಮೇಲಿನ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನುವಜಾಗೊಳಿಸಿತ್ತು.

ಈಗ ನಿರಾಳರಾಗಿರುವ ಖುಷ್ಬು, ಕಾಂಗ್ರೆಸ್ ಪಕ್ಷ ಸೇರುವುದಾಗಿ ತಿಳಿಸಿದ್ದಾರೆ. "ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಕರೆ ಬಂದರೆ ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷದ ದೊಡ್ಡ ಅಭಿಮಾನಿ ನಾನು" ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ತಮಗೆ ಸೂಚನೆ ಬಂದಿದಿಯೇ ಎಂದು ಕೇಳಲಾಗಿ, ಈ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ಚೆನ್ನೈಗೆ ಮರಳಿದ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ.

ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನ 100ಕ್ಕೂ ಅಧಿಕ ಚಿತ್ರಗಳಲ್ಲಿ ಖುಷ್ಬು ನಟಿಸಿದ್ದಾರೆ. ಐದು ವರ್ಷಗಳ ಹಿಂದೆ ಎಐಎಡಿಎಂಕೆ ಮುಖಂಡೆ ಜೆ ಜಯಲಲಿತಾ ಅವರಿಗೆ ಆತ್ಮೀಯರಾಗಿದ್ದರು ಖುಷ್ಬು. ಆದರೆ ವಿವಾಹ ಪೂರ್ವ ಲೈಂಗಿಕತೆ ವಿವಾದ ಸುತ್ತಿಕೊಂಡ ಬಳಿಕ ಜಯಲಲಿತಾ ಜೊತೆಗಿನ ಸಂಬಂಧ ಹಳಸಿತ್ತು. ಬಳಿಕ ಖುಷ್ಬು ರಾಷ್ಟ್ರೀಯ ಪಕ್ಷಗಳತ್ತ ತಮ್ಮ ದೃಷ್ಟಿ ಹರಿಸಿದ್ದರು.ಮಹಿಳೆಯರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕಾಗಿ ತಮಗೆ ಉತ್ತಮ ರಾಜಕೀಯ ವೇದಿಕೆ ಬೇಕಾಗಿದೆ ಎಂದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada