»   » ಬಿಗ್ ಬಿನ ಜೊತೆ ಊಟಿಯಲ್ಲಿ ಲಕ್ಕಿಸ್ಟಾರ್

ಬಿಗ್ ಬಿನ ಜೊತೆ ಊಟಿಯಲ್ಲಿ ಲಕ್ಕಿಸ್ಟಾರ್

Posted By:
Subscribe to Filmibeat Kannada

"ಅಮಿತಾಬ್ ಬಚ್ಚನ್ ಎಂದರೆ ನನಗೆ ಪ್ರಾಣ, ಜೀವನದಲ್ಲಿ ಒಮ್ಮೆ ಅವರನ್ನು ನೋಡ್ಬೇಕು ನನ್ನ ಅವರ ಬಳಿಗೆ ಕರೆದುಕೊಂಡು ಹೋಗು ಪುರು"ಎಂದು ಅಮೃತಧಾರೆ ಚಿತ್ರದಲ್ಲಿ ನಟಿ ರಮ್ಯಾ ದುಂಬಾಲು ಬಿದ್ದಿದ್ದು ಆಮೇಲೆ ಬಿಗ್ ಬಿ ಭೇಟಿ ಮಾಡ್ಡಿದ್ದು ಅದ್ಭುತವಾಗಿ ಮೂಡಿ ಬಂದಿತ್ತು.

ಸಿನಿಮಾದಲ್ಲಿ ಬಿಗ್ ಬಿ ನೋಡಿ ಸಂತೋಷಪಟ್ಟಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈಗ ನಿಜ ಜೀವನದಲ್ಲಿ ಬಿಗ್ ಬಿಯನ್ನು ಹುಡುಕಿಕೊಂಡು ಹೋಗಿ, ಅಮಿತಾಬ್ ಭೇಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಬಿಗ್ ಬಿ ನಟನೆ ಯ ಚಿತ್ರವೊಂದರ ಚಿತ್ರೀಕರಣ ಊಟಿಯಲ್ಲಿ ನಡೆದಿದ್ದು, ದಿವ್ಯ ಸ್ಪಂದನಳಿಗೆ ಖುಷಿಯೋ ಖುಷಿ. ನಾಗಶೇಖರ್ ನಿರ್ದೇಶನದ ಸಿದ್ದಲಿಂಗು ಶೂಟಿಂಗ್ ಕೂಡಾ ನೀಲಗಿರೀಸ್ ತಪ್ಪಲಿನಲ್ಲಿ ನಡೆಯುತ್ತಿರುವುದು ರಮ್ಯಾಳಿಗೆ ಡಬ್ಬಲ್ ಖುಷಿ ತಂದಿದೆ.

ಇತ್ತೀಚೆಗೆ ಹೊಸ ಮನೆಗೆ ಗೃಹ ಪ್ರವೇಶ ಮಾಡಿಹಾಲು ಉಕ್ಕಿಸಿ, ಸಂಭ್ರಮದಿಂದ ಎಲ್ಲರಿಗೂಲಕ್ಕಿ ಸ್ಟಾರ್ ಸಿಹಿ ಹಂಚಿದ್ದರು.ಚಿತ್ರೀಕರಣದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ರಜಾದಿನಗಳನ್ನು ಜಾಲಿಯಾಗಿ ಕಳೆಯಲು ಬಾಲಿ ದ್ವೀಪದೆಡೆಗೆ ಹಾರಿದ್ದ ರಮ್ಯಾ, ಬೆಂಗಳೂರಿಗೆ ಬಂದಿಳಿದ ತಕ್ಷಣ ಊಟಿ ಕಡೆಗೆ ಹೊರಟಿದ್ದರು.

Ramya meets Big B in Ooty

ಊಟಿಗೆ ಹೋದರೆ ಸವಿಸವಿನೆನಪು ಸಾವಿರ ನೆನಪು ಎಂದು ರಮ್ಯಾ ಹಾಡುವುದ ಮರೆಯುವುದಿಲ್ಲ. ಸದ್ಯಕ್ಕೆ ರಮ್ಯಾಳಿಗೆ ಬಿಗ್ ಬಿ ಭೇಟಿಗೂ ಹೆಚ್ಚಿನ ಕೆಲಸವಿಲ್ಲ. ನೀಲ್ ಗಿರೀಸ್ ವಾತಾವರಣದಲ್ಲಿ ಬಿಗ್ ಬಿ ಭೇಟಿ ವಾಹ್ ಅದ್ಭುತ ಅನುಭವ ಎಂದು ಬಿಗ್ ಜೊತೆ ಹಾಗೂ ಸುಮಲತಾ ಆಂಟಿ ಜೊತೆ ಫೋಟೊ ತೆಗೆಸಿಕೊಂಡು ಅಭಿಮಾನಿಗೆ ಇಷ್ಟದ ಸ್ಟಾರ್ ಕಣ್ಣೆದುರಿಗೆ ಸಿಕ್ಕಾಗ ಆಗುವ ಸಂಭ್ರಮವನ್ನು ಪಟ್ಟ ರಮ್ಯಾ, ಬಿಗ್ ಬಿಗೆ ಥ್ಯಾಂಕ್ಸ್ ಹೇಳಿ ಟ್ವೀಟ್ ಮಾಡಿದ್ದಾರೆ.

ಸುಮಲತಾ ಬಿಗ್ ಬಿ ಜೋಡಿ : ಕಂದಹಾರ್ ಎಂಬ ಮಲಯಾಳಂ ಚಿತ್ರದಲ್ಲಿ ಬಿಗ್ ಬಿ ಪತ್ನಿಯಾಗಿ ಸುಮಲತಾ ಅಂಬರೀಷ್ ನಟಿಸುತ್ತಿರುವುದು ವಿಶೇಷ. ಮಲ್ಲು ಸಿನಿ ರಸಿಕರಿಗೆ ಸುಮಲತಾ ಈಗಾಗಲೇ ಚಿರಪರಿಚಿತ. ಮೋಹನ್ ಲಾಲ್, ಮಮ್ಮೂಟಿ ಮುಂತಾದ ಸ್ಟಾರ್ ಗಳ ಜೊತೆ ಸುಮಲತಾ ನಟಿಸಿ ಹೆಸರು ಮಾಡಿದ್ದರು. ಇಷ್ಟೇ ಅಲ್ಲದೆ ಈ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿರುವುದು ಹೊಸ ವಿಷಯವೇನಲ್ಲ.

English summary
Actress Ramya is in Nilgiris for Siddalingu shooting. incidently BigB is also shooting in Ooty. So, Die hard fan of Big B got big chance to spend time with star.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada