»   » ಎ ಆರ್ ರೆಹಮಾನ್ ಎರಡು ಗ್ರಾಮಿ ಪ್ರಶಸ್ತಿಗಳು

ಎ ಆರ್ ರೆಹಮಾನ್ ಎರಡು ಗ್ರಾಮಿ ಪ್ರಶಸ್ತಿಗಳು

Posted By:
Subscribe to Filmibeat Kannada

ಹೆಸರಾಂತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತೊಮ್ಮೆ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದಾರೆ. ಲಾಸ್ ಏಂಜಲ್ಸ್ ನಲ್ಲಿ ನಡೆದ 52ನೇ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡು ಗ್ರಾಮಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಂಡಾಗ್' ಚಿತ್ರದ ಸಂಗೀತಕ್ಕಾಗಿ ರೆಹಮಾನ್ ಗೆ ಎರಡು ಗ್ರಾಮಿ ಪ್ರಶಸ್ತಿಗಳು ಒಲಿದಿವೆ.

'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಅತ್ಯುತ್ತಮ ಸಂಗೀತ ಸಂಯೋಜನೆ ಹಾಗೂ 'ಜೈ ಹೋ' ಹಾಡಿನ ಸಂಗೀತಕ್ಕಾಗಿ ರೆಹಮಾನ್ ಗೆ ಎರಡು ಗ್ರಾಮಿ ಪ್ರಶಸ್ತಿಗಳು ದೊರಕಿವೆ. ಪ್ರಶಸ್ತಿ ಬಂದ ಬಗ್ಗೆ ರೆಹಮಾನ್ ಮಾತನಾಡುತ್ತಾ, ಪ್ರಶಸ್ತಿ ಬಂದದ್ದು ಹುಚ್ಚು ಹಿಡಿದಷ್ಟು ಸಂತಸವಾಗಿದೆ. ದೇವರು ದೊಡ್ಡವನು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ: ರೆಹಮಾನ್ ಗೆ ಗ್ರಾಮಿ ಪ್ರಶಸ್ತಿ ಗರಿ

'ಕಾಡಿಲ್ಯಾಕ್ ರೆಕಾರ್ಡ್', 'ಇನ್ ಗ್ಲೋರಿಯಸ್ ಬಾಸ್ಟರ್ಡ್', 'ಟ್ವಿಲೈಟ್' ಮತ್ತು 'ಟ್ರೂ ಬ್ಲಡ್' ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ಚಿತ್ರಗಳನ್ನು ಹಿಂದಿಕ್ಕಿ 'ಸ್ಲಂಡಾಗ್ ಮಿಲಿಯನೇರ್' ಚಿತ್ರ ರೆಹಮಾನ್ ಗೆ ಎರಡು ಗ್ರಾಮಿ ಪ್ರಶಸ್ತಿಗಳನ್ನು ತಂದುಕೊಟ್ಟಿದೆ.

ಗ್ರಾಮಿ ಪ್ರಶಸ್ತಿಗಳಿಗೆ ರೆಹಮಾನ್ ನಾಮನಿರ್ದೇಶನಗೊಳ್ಳುತ್ತಿರುವುದು ಇದೇ ಮೊದಲು. ಗ್ರಾಮಿ ಪ್ರಶಸ್ತಿ ಪಡೆದಿರುವ ಭಾರತದ ಪಂಡಿತ್ ರವಿಶಂಕರ್, ಜಾಕೀರ್ ಹುಸೇನ್, ವಿಶ್ವಮೋಹನ್ ಭಟ್ ಹಾಗೂ ವಿಕ್ಕು ವಿನಾಯಕ್ ಸಾಲಿಗೆ ಇದೀಗ ರೆಹಮಾನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada