»   »  ಬಣ್ಣದ ಲೋಕ ಕುರಿತು ಅವಿನಾಶ್ ಗೆ ತಪ್ಪು ತಿಳುವಳಿಕೆ !

ಬಣ್ಣದ ಲೋಕ ಕುರಿತು ಅವಿನಾಶ್ ಗೆ ತಪ್ಪು ತಿಳುವಳಿಕೆ !

Subscribe to Filmibeat Kannada

ಚಿತ್ರರಂಗದ ಮತ್ತೊಂದು ಹೆಸರು ಬಣ್ಣದ ಲೋಕ. ಸಿನಿಮಾರಂಗದಲ್ಲಿ ಜೀವನ ಸಾಗಿಸುವವರಿಗೂ ಕಷ್ಟ-ಸುಖ, ನೋವು-ನಲಿವು ಎಲ್ಲಾ ಇದೆ ಎನ್ನುವುದ್ದನ್ನು ಸಿನೆಮಾ ಮಾಡಿ ತೋರಿಸುತ್ತಿದ್ದಾರೆ ನಿರ್ದೇಶಕ ರಾಂಪ್ರಸಾದ್. ಈ ಸಿನೆಮಾಗೆ ಅವರು ಸೂಚಿಸಿರುವ ಹೆಸರು 'ಬಣ್ಣಬಣ್ಣದ ಲೋಕ'.

ನಾಯಕಿಯರಾದ ಮೇಘನಾ ಗೌಡ ಹಾಗೂ ಶ್ರಾವಣಿ ತಂದೆ ಪಾತ್ರಧಾರಿ ಅವಿನಾಶ್ ಅವರಿಗೆ ಸಿನಿಮಾರಂಗ ಎಂದರೇ ತಪ್ಪು ಕಲ್ಪನೆ ಇರುತ್ತದೆ. ಅವಿನಾಶ್ ಅವರಿಗಿದ್ದ ತಪ್ಪು ತಿಳುವಳಿಕೆಯನ್ನು ಚಿತ್ರದಲ್ಲಿ ಕಾಲೇಜು ಉಪನ್ಯಾಸಕನ ಪಾತ್ರ ನಿರ್ವಹಿಸುತ್ತಿರುವ ರಂಗಾಯಣ ರಘು ದೂರ ಮಾಡುತ್ತಾರೆ. 'ಸಿನೆಮಾದವರು ಅಂದರೆ ಅವರು ಮನುಷ್ಯರು. ಅವರಿಗೂ ಹೃದಯ ಇದೆ. ಅದೊಂದು ಉತ್ತಮ ಕ್ಷೇತ್ರ. ದಯವಿಟ್ಟು ನೀವು ಚಿತ್ರರಂಗದ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವನ್ನು ನಿರ್ದೇಶಕರು ಪೂರೈಸಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ 'ಬಣ್ಣಬಣ್ಣದ ಲೋಕ ಚಿತ್ರವನ್ನು ಸಿ.ಕೃಷ್ಣಪ್ಪ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಂಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ವಿ.ಚಂದ್ರಶೇಖರ್ ಛಾಯಾಗ್ರಹಣ, ಟಿ.ಎ.ಥಾಮಸ್ ಸಂಗೀತ, ಬಸವರಾಜ್ ಅರಸ್ ಸಂಕಲನ, ಅನಿಲ್‌ಕೃಷ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಶ್ರಾವಣಿ, ಮೇಘನ ಗೌಡ, ರಂಗಾಯಣ ರಘು, ಅವಿನಾಶ್, ಬ್ರೈನ್ ಬಾಲ, ಬ್ಯಾಂಕ್ ಜನಾರ್ಧನ್, ರೇಖಾ ಕುಮಾರ್, ಅಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada