»   » ಖುಷ್ಬು ಸಹೋದರನ 'ಜನನಿ' ಕಡೆಗೂ ತೆರೆಗೆ

ಖುಷ್ಬು ಸಹೋದರನ 'ಜನನಿ' ಕಡೆಗೂ ತೆರೆಗೆ

Posted By:
Subscribe to Filmibeat Kannada

ದಕ್ಷಿಣದ ಜನಪ್ರಿಯ ತಾರೆ ಖುಷ್ಬು ಸಹೋದರ ಶಿವ ಅಲಿಯಾಸ್ ಅಬ್ದುಲ್ಲಾ ಅಭಿನಯದ ಚೊಚ್ಚಲ ಚಿತ್ರ 'ಜನನಿ' ಈ ವಾರ ಬಿಡುಗಡೆಯಾಗುತ್ತಿದೆ. ದಿವಂಗತ ನಿರ್ಮಾಪಕ ಚಂದೂಲಾಲ್ ಜೈನ್ ಅವರ ಮಗ ಸಿ.ರಾಜಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎ.ಕೆ.ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

ಮಾತೃವಾತ್ಸಲ್ಯ ಪ್ರಧಾನವಾದ ಈ ಚಿತ್ರದ ಮುಖ್ಯಪಾತ್ರದಲ್ಲಿ ದಕ್ಷಿಣಭಾರತದ ಖ್ಯಾತ ತಾರೆ ಖುಷ್ಬು ಅಭಿನಯಿಸಿದ್ದಾರೆ. ಶಿವ, ವಿಬಾ, ಜಯಸುಧಾ, ಪ್ರಕಾಶ್ ರೈ, ಕಾಶಿ, ಅಶೋಕ್ ಮುಂತಾದವ ತಾರಾಬಳಗವಿರುವ ಈ ಚಿತ್ರಕ್ಕೆ ಅಲಿ ಸಂಗೀತ ಸಂಯೋಜಿಸಿದ್ದಾರೆ.

ರಾಜಕುಮಾರ್ ನಿರ್ದೇಶಿಸುತ್ತಿರುವ ನಾಲ್ಕನೆಯ ಇದಾಗಿದೆ. ಈ ಹಿಂದೆ ಅವರು ಸಂಗ್ರಾಮ, ಅಭಿಜಿತ್ ಮತ್ತು ಯುದ್ಧಕಾಂಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಜಾಲಿಬಾಸ್ಟಿನ್ ಸಾಹಸ, ಕೆ.ಕಲ್ಯಾಣ್, ಎಸ.ಮೋಹನ್ ಗೀತರಚನೆ ಮತ್ತು ಎಸ್.ಮೋಹನ್ ಸಂಭಾಷಣೆ 'ಜನನಿ ಚಿತ್ರಕ್ಕಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X