»   »  'ಕೆಂಚ'ನಿಗೆ ಸೆನ್ಸಾರ್ ನಿಂದ ಯು/ಎ ಅರ್ಹತಾ ಪತ್ರ

'ಕೆಂಚ'ನಿಗೆ ಸೆನ್ಸಾರ್ ನಿಂದ ಯು/ಎ ಅರ್ಹತಾ ಪತ್ರ

Posted By:
Subscribe to Filmibeat Kannada
Kencha clears censor
ರಮೇಶ್ ಯಾದವ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕೆಂಚ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಆರಂಭದ ದಿನದಿಂದ ಉತ್ಸುಕರಾಗಿ ಚಿತ್ರೀಕರಣ ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿದ ನಿರ್ಮಾಪಕರಿಗೆ ಚಿತ್ರ ಸಿದ್ದವಾಗಿ ಸೆನ್ಸಾರ್ ಮುಂದೆ ಹೋಗುವ ವೇಳೆಗೆ ಆತಂಕ ಮನೆ ಮಾಡುತ್ತದೆ. ನಮ್ಮ ಚಿತ್ರಕ್ಕೆ ಯಾವ ಅರ್ಹತಾಪತ್ರ ದೊರಕುವುದೊ? ಎಂಬ ಕಾತುರ ಅವರನ್ನು ಕಾಡುತ್ತದೆ. ಮಂಡಳಿಯಿಂದ ತೀರ್ಪು ಬಂದ ಮೇಲಷ್ಟೇ ಆತ ನಿರಾಳ. ಕೆಲವು ನಿರ್ಮಾಪಕರು ಇಲ್ಲಿನ ಮಂಡಳಿ ತೀರ್ಪಿಗೆ ವಿರುದ್ದವಾಗಿ ಟ್ರಿಬ್ಯುನಲ್‌ಗೆ ಮೊರೆ ಹೋಗುವುದುಂಟು.

ಸಾಹಸದೊಂದಿಗೆ ಕೂಡಿರುವ ಈ ಪ್ರೇಮ ಕಥಾನಕವನ್ನು ಮಂಡಳಿಯ ತೀರ್ಪಿಗೆ ಅನುಗುಣವಾಗಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಪ್ರಜ್ವಲ್ ದೇವರಾಜ್ ವಿಭಿನ್ನ ಶೈಲಿಯಲ್ಲಿ ಅಭಿನಯಿಸಿರುವ ಈ ಚಿತ್ರ ಸದ್ಯದಲ್ಲೇ ಚಿತ್ರ ರಸಿಕರ ಮುಂದೆ ಬರಲಿದೆ. ಅದಕ್ಕೂ ಮುನ್ನ ತಮ್ಮದೇ ಧ್ವನಿಸುರುಳಿ ಸಂಸ್ಥೆಯ ಮೂಲಕ ಚಿತ್ರದ ಹಾಡುಗಳನ್ನು ರಮೇಶ್ ಯಾದವ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ.

ಪಿ.ಎನ್.ಸತ್ಯ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಪಿ.ಎಲ್.ರವಿ ಛಾಯಾಗ್ರಹಣ, ವರ್ಮನ್ ಸಂಕಲನ, ಮುರುಳಿ, ದೇವ ಸಂಪತ್, ಅರವಿಂದ್ ನೃತ್ಯ ನಿರ್ದೇಶನ, ಪಳನಿರಾಜ್, ಡಿಫರೆಂಟ್ ಡ್ಯಾನಿ ಸಾಹಸ, ರಂಗಸ್ವಾಮಿ ನಿರ್ಮಾಣ ನಿರ್ವಹಣೆಯಿರುವ 'ಕೆಂಚ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಶ್ರೀಪ್ರಜ್ಞಾ, ಶರತ್ ಲೋಹಿತಾಶ್ವ, ಭವ್ಯ, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada