For Quick Alerts
  ALLOW NOTIFICATIONS  
  For Daily Alerts

  ನಾನು ನಿಮ್ಮವನು ನಿಮ್ಮ ಮನೆ ಮಗನೂ, ಶಿವಣ್ಣ

  By Rajendra
  |

  ಪ್ರತಿಯೊಂದು ಸಂಸ್ಥೆಯು ಮಾನವೀಯ ನೆಲೆಗಟ್ಟಿನಲ್ಲಿ, ಪರೋಪಕಾರಕ್ಕೆ ಪ್ರಾಧಾನ್ಯತೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ. ಅವರು ಅನುಶ್ರುತ ಫೌಂಡೇಷನ್ ಟ್ರಸ್ಟ್ ವತಿಯಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಕುರುಬರಹಳ್ಳಿ ವೃತ್ತದಲ್ಲಿ ಆರಂಭಿಸಿರುವ ನೂತನ ಉದ್ಯೋಗ ಕೌಶಲ ತರಬೇತಿ ಹಾಗೂ ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

  ಕೆಲವರು ಹೆಸರಿಗೋಸ್ಕರ, ಮತ್ತೆ ಕೆಲವರು ಖ್ಯಾತಿಗಾಗಿ ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದರೆ ಶಾಸಕ ನೆ ಲ ನರೇಂದ್ರ ಬಾಬು ಅವರು ಮಾನವೀಯ ನೆಲೆಗಟ್ಟಿನಲ್ಲಿ ಉದ್ಯೋಗ ಕೌಶಲ ಕೇಂದ್ರ ಸ್ಥಾಪಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಶಿವಣ್ಣ ಬಣ್ಣಿಸಿದರು. ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

  ಮಾತಿಗಿಂತ ಕೃತಿ ಮುಖ್ಯ. ಅದೇ ಇತರರಿಗೆ ಆದರ್ಶವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಶಿವಣ್ಣ ಒಂದು ಹಾಡನ್ನೂ ಹಾಡಿದರು, ನಾನು ನಿಮ್ಮವನು, ನಿಮ್ಮ ಮನೆ ಮಗನೂ..." ಶಿವಣ್ಣನ ಹಾಡಿಗೆ ಸಭಿಕರ ಕರತಾಡನ ಮುಗಿಲು ಮುಟ್ಟಿತು. (ಏಜೆನ್ಸೀಸ್)

  English summary
  Kannada actor Shivarajkumar lauds MLA N L Narendra Babu's works. He speaks at the inauguration of ‘Unique Personality Training and Development Centre’ setup by Anushrutha Foundation Trust at Kurubarahalli on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X