»   » ದುಬೈಗೆ ಹಾರಲಿದ್ದಾರೆ 'ಸೂಪರ್' ಸ್ಟಾರ್ ಉಪೇಂದ್ರ

ದುಬೈಗೆ ಹಾರಲಿದ್ದಾರೆ 'ಸೂಪರ್' ಸ್ಟಾರ್ ಉಪೇಂದ್ರ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸುತ್ತಿರುವ 'ಸೂಪರ್' ಚಿತ್ರ ದುಬೈ ಮತ್ತು ಲಂಡನ್ ನಲ್ಲಿ ಚಿತ್ರೀಕರಣಗೊಳ್ಳಲಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚಿತ್ರೀಕರಣದ ಜೊತೆಗೆ ಎರಡು ಹಾಡುಗಳ ಚಿತ್ರೀಕರಣ ಸಹ ದುಬೈ ಮತ್ತು ಲಂಡನ್ ನಲ್ಲಿ ನಡೆಯಲಿದೆ.

ದುಬೈನಲ್ಲಿ ಚಿತ್ರೀಕರಿಸಬೇಕಾದ ತಾಣಗಳನ್ನು ಈಗಾಗಲೆ ಉಪೇಂದ್ರ ಮತ್ತು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನೋಡಿಕೊಂಡು ಬಂದಿದ್ದಾರೆ. ದುಬೈನಲ್ಲಿ ಚಿತ್ರೀಕರಿಸಿದ ಬಳಿಕ ಉಪ್ಪಿ ಮತ್ತು ಅವರ ತಂಡ ಲಂಡನ್ ನತ್ತ ಪಯಣ ಬೆಳೆಸಲಿದೆ. ಚಿತ್ರದ ನಾಯಕಿ ನಯನತಾರಾ ಚಿತ್ರತಂಡವನ್ನು ಚೆನ್ನೈ ಮೂಲಕ 'ಸೂಪರ್' ಚಿತ್ರತಂಡವನ್ನು ಸೇರಲಿದ್ದಾರೆ.

ಏತನ್ಮಧ್ಯೆ ಉಪೇಂದ್ರ ತಮ್ಮ ಸೂಪರ್ ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ದುಬೈಗೆ ಹಾರಲಿದ್ದಾರೆ ಎನ್ನುತ್ತವೆ ಮೂಲಗಳು. ತೆಲುಗು ಚಿತ್ರರಂಗದ ಹಾಸ್ಯನಟರಾದ ಅಲಿ, ಬ್ರಹ್ಮಾನಂದಂ ಸಹ ಚಿತ್ರದಲ್ಲಿ ಸ್ಥಾನಪಡೆದಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada