»   »  ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು

ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು

Posted By:
Subscribe to Filmibeat Kannada
vishnu and dwarkish in apta mithra
2004 ರಲ್ಲಿ ಬಿಡುಗಡೆಗೊಂಡು ಪ್ರಚಂಡ ಜಯಭೇರಿ ಭಾರಿಸಿದ್ದ "ಆಪ್ತಮಿತ್ರ" ಚಿತ್ರದ ಎರಡನೇ ಭಾಗಕ್ಕೆ "ಆಪ್ತರಕ್ಷಕ" ಎಂದು ಹೆಸರಿಡಲಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಮಾರ್ಚ್ 10 ರಿಂದ ಆರಂಭವಾಗಲಿದೆ.

ತಮಿಳುನಾಡಿನ ಪಳನಿಯಲ್ಲಿ ದೊಡ್ಡ ಬಂಗಲೆಯೊಂದನ್ನು 20 ದಿನಕ್ಕಾಗಿ ಬಾಡಿಗೆಗೆ ಪಡೆಯಲಾಗಿದೆ. ಇದು ವಿಷ್ಣು ಅವರು 200 ನೇ ಚಿತ್ರ ಕೂಡ. ಮೂಲ ಮಲಯಾಳಂ ಚಿತ್ರದ ರಿಮೇಕ್ ಆಗಿದ್ದ ಆಪ್ತಮಿತ್ರ ನಂತರ ತಮಿಳಿನಲ್ಲಿ ರಜನಿಕಾಂತ್ ಅಭಿನಯದ ಚಂದ್ರಮುಖಿಯಾಗಿ ಅದಾದನಂತರ ಅಕ್ಷಯ್ ಕುಮಾರ್ ಅಭಿನಯದ ಭೂಲ್ ಬಲಯ್ಯಾ ಆಗಿ ಯಶಶ್ಸ್ಸು ಗಳಿಸಿತ್ತು.

ಆಪ್ತಮಿತ್ರ ಚಿತ್ರಕ್ಕೆ ದ್ವಾರಕೀಶ್ ಜೊತೆ ಸಹನಿರ್ಮಾಪಕರಾಗಿದ್ದ ಕೃಷ್ಣಕುಮಾರ್ "ಆಪ್ತರಕ್ಷಕ" ಚಿತ್ರದ ನಿರ್ಮಾಪಕರಾಗಿದ್ದಾರೆ. ವಿಷ್ಣು ಈ ಚಿತ್ರದಲ್ಲೂ ಮನೋರೋಗ ತಜ್ಞನಾಗಿ ನಟಿಸಲಿದ್ದಾರೆ. ಆಪ್ತಮಿತ್ರ ಚಿತ್ರದಲ್ಲಿ ನಟಿಸಿದ್ದ ಸತ್ಯಜಿತ್ ಪಾತ್ರವನ್ನು ಹಿರಿಯ ನಟ ಶ್ರೀನಿವಾಸ ಮೂರ್ತಿ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲೂ ಮಾಂತ್ರಿಕನ ಪಾತ್ರವನ್ನು ಅವಿನಾಶ್ ಮಾಡಲಿದ್ದಾರೆ. ದಿವಂಗತ ನಟಿ ಸೌಂದರ್ಯ ಅವರು ಪಾತ್ರವನ್ನು ಲಕ್ಷ್ಮೀ ಗೋಪಾಲಸ್ವಾಮಿ ಮತ್ತು ಪ್ರೇಮಾ ಅವರು ಪಾತ್ರವನ್ನು ತೆಲುಗು ತಮಿಳಿನ ಬೇಡಿಕೆಯ ನಟಿ ಸ್ನೇಹ ಮಾಡಲಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಬಹಿರಂಗಗೊಂಡಿದೆ. ಉಳಿದ ಪಾತ್ರಗಳು ಇನ್ನೂ ರಹಸ್ಯವಾಗಿದ್ದು, ಆಪ್ತಮಿತ್ರಕ್ಕಿಂತ ಹೆಚ್ಚಿನ ದೃಶ್ಯ ವೈಭವ ಈಚಿತ್ರದಲ್ಲಿ ಕಾಣಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:
ಕನ್ನಡ ನಾಯಕ ನಟರಿಗೆ ದ್ವಾರಕೀಶ್ ಛೀಮಾರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada