»   »  ಜುಲೈ 3ರಂದು ಚಂಕಾಯ್ಸಿ ಚಿಂದಿ ಉಡಾಯ್ಸಿ

ಜುಲೈ 3ರಂದು ಚಂಕಾಯ್ಸಿ ಚಿಂದಿ ಉಡಾಯ್ಸಿ

Subscribe to Filmibeat Kannada

ಜುಲೈ 3ರಂದು ಕೋಮಲ್ ಕುಮಾರ್ ಅಭಿನಯದ 'ಚಂಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಜುಲೈ 4ರಂದು ಅವರ ಹುಟ್ಟುಹಬ್ಬ. ಈ ವರ್ಷ ಕಾಕತಾಳೀಯವೆಂಬಂತೆ ಕೋಮಲ್ ಗೆ ಈ ಎರಡು ಘಟನೆಗಳು ಒಂದರ ಹಿಂದೆ ಒಂದು ಎದುರಾಗಿವೆ.

ಈ ಚಿತ್ರದ ಮೂಲಕ ಕೋಮಲ್ ಅವರ ವೃತ್ತಿಜೀವನ ಒಂದು ಘಟ್ಟ ಮುಟ್ಟಿದಂತಾಗುತ್ತದೆ. ತಮ್ಮ ನಟನೆಯಿಂದ ಅಭಿಮಾನಿಗಳನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ಅಪರೂಪದ ಕಲಾವಿದ ಕೋಮಲ್. ಅವರು ಈ ಚಿತ್ರದ ಪ್ರಮುಖ ಪಾತ್ರಧಾರಿ. ಇವರೊಂದಿಗೆ ನಾಯಕರಾದ ಕಿರಣ್, ರಾಹುಲ್, ಗಿರಿ ದಿನೇಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದ್ದರಿಂದ ಇದು ನಾಲ್ವರು ನಾಯಕರು ನಟಿಸಿರುವ ಚಿತ್ರವೆಂಬ ಖ್ಯಾತಿಗೆ ಪಾತ್ರವಾಗಿದೆ.

ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರ ಭಾರತ ಸೇರಿದಂತೆ ಮೂರು ದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ನಿಧಿ ಸುಬ್ಬಯ್ಯ ಹಾಗೂ ನೇತಾನಿಯಾ ಚಿತ್ರದ ನಾಯಕಿಯರು. ಮುಖ್ಯಮಂತ್ರಿಚಂದ್ರು, ಉಮಾಶ್ರೀ, ಹೊನ್ನವಳ್ಳಿಕೃಷ್ಣ, ಆಸಿಫ್, ಪ್ರಮಿಳಾಜೋಷಾಯಿ, ಮಾರಿಮುತ್ತು, ಶ್ರೀನಿವಾಸಗೌಡ, ನಂದ ಮುಂತಾದವರು ಈ ಚಿತ್ರದಲ್ಲಿ ಆಭಿನಯಿಸಿರುವ ಅನುಭವಿ ಕಲಾವಿದರು.

ಈವರೆಗೂ ಸಾಕಷ್ಟು ನಗೆ ಚಿತ್ರಗಳನ್ನು ನಿರ್ದೇಶಿಸಿರುವ ಎ.ಆರ್.ಬಾಬು ಈ ಚಿತ್ರದ ನಿರ್ದೇಶಕರು. ಇದು ನಿರ್ದೇಶಕರ 25ನೇ ಚಿತ್ರ ಕೂಡ. ಬಾಲಾಜಿ ಅವರ ಸಂಗೀತ, ಅಶೋಕ್ ಕಶ್ಯಪ್ ಕ್ಯಾಮೆರಾ, ಪ್ರಕಾಶ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶ್ರೀಧರ್ ಹಾಗೂ ವಿದ್ಯಾ ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆ 'ಚಂಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada