»   » ಬೆಟ್ಟದಾಸನಪುರದಲ್ಲಿ ಚಿರು ಸಾಹಸ

ಬೆಟ್ಟದಾಸನಪುರದಲ್ಲಿ ಚಿರು ಸಾಹಸ

Posted By:
Subscribe to Filmibeat Kannada

ತೆಲುಗಿನಲ್ಲಿ ನಾಗೇಶ್ವರರಾವ್ ಮೊಮ್ಮಗನೊಡನೆ ಕುಣಿದು ಬಂದಿರುವ ದೆಹಲಿ ಬೆಡಗಿ ಕೀರ್ತಿ, ಬೆಂಗಳೂರಿನ ಬಿಸಿಲಿಗೆ ಕೊಂಚ ಬಸವಳಿದಂತೆ ಕಂಡು ಬಂದರು. ಅರ್ಜುನ್ ಸರ್ಜಾರ ಅಳಿಯ ಯುವನಾಯಕ ಚಿರಂಜೀವಿ ಸರ್ಜಾ ಬಂಡೆಗಲ್ಲ ಮೇಲೆ ನಿಂತು ರೌಡಿಗಳೊಡಿಗೆ ಒಬ್ಬಂಟಿಯಾಗಿ ಹೋರಾಡುತ್ತಿದ್ದರು.

ದೃಶ್ಯದ ಹಿನ್ನೆಲೆ : ಶ್ರೀಮಂತರ ಮನೆಯ ಹುಡುಗಿ(ಕೃತಿ)ಯನ್ನು ಮಧ್ಯಮವರ್ಗದ ಹುಡುಗ(ಚಿರಂಜೀವಿ ಸರ್ಜಾ) ಪ್ರೀತಿಸಿದನೆಂದರೆ ಆ ಹುಡುಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹುಡುಗನಿಗೆ ಎಲ್ಲಾ ಕಷ್ಟಗಳನ್ನು ನಿಭಾಯಿಸುವ ಸಾಮರ್ಥ್ಯವಿದ್ದರೆ ಪ್ರೀತಿಗೆ ಜಯ ದೊರಕವುದು ಖಚಿತ.

ಚಿತ್ರದ ನಾಯಕನಿಗೆ ಗೃಹ ಮಂತ್ರಿಗಳ ಪುತ್ರಿಯೊಂದಿಗೆ ಪ್ರೇಮ ಆರಂಭವಾಗಿರುತ್ತದೆ. ಪ್ರೇಯಸಿಯ ಮನೆ ಕಡೆಯವರಿಂದ ಈ ಪ್ರೀತಿಗೆ ಪ್ರತಿರೋಧ ವ್ಯಕ್ತವಾಗಿರುತ್ತದೆ. ಆದರೆ ಇದನ್ನು ಧಿಕ್ಕರಿಸಿ ಇವರಿಬ್ಬರ ಪ್ರೇಮ ಸಾಗುತ್ತಿರುತ್ತದೆ. ಹೀಗೆ ಒಮ್ಮೆ ಈ ಯುವ ಪ್ರೇಮಿಗಳು ನಡೆದು ಬರುತ್ತಿದ್ದನ್ನು ಗಮನಿಸಿದ ನಾಯಕಿಯ ತಂದೆಯ ಕಡೆಯವರು ನಾಯಕನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ. ಬಂದ ಪಡೆಯೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸಿದ ನಾಯಕ ಅವರನ್ನೆಲ್ಲಾ ಮಟ್ಟ ಹಾಕುತ್ತಾನೆ.

ಈ ಸನ್ನಿವೇಶವನ್ನು ಸಾಹಸ ನಿರ್ದೇಶಕ ಪಳನಿರಾಜ್ ಅವರ ಸಾರಥ್ಯದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆಟ್ಟದಾಸಪುರದಲ್ಲಿ 'ಚಿರು' ಚಿತ್ರಕ್ಕಾಗಿ ಚಿತ್ರಿಸಿಕೊಳ್ಳಲಾಯಿತು. ನಾಯಕ ಚಿರಂಜೀವಿ ಸರ್ಜಾ, ನಾಯಕಿ ಕೃತಿ ಮುಂತಾದ ಕಲಾವಿದರು ಈ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಮಾರ್ಸ್ ಫಿಲಂಸ್ ಲಾಂಛನದಲ್ಲಿ ಸುರೇಶ್‌ಜೈನ್ ನಿರ್ಮಿಸುತ್ತಿರುವ 'ಚಿರು' ಚಿತ್ರವನ್ನು ಮಹೇಶ್‌ಬಾಬು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರುಳಿ, ಹರ್ಷ ನೃತ್ಯ ಸಂಯೋಜನೆಯಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada