»   »  ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಜಯಮಾಲಾ

ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಜಯಮಾಲಾ

Subscribe to Filmibeat Kannada
Dr Jayamala
ಅಮೃತ ಮಹೋತ್ಸವ ಸಂಭ್ರಮದ ಬಿಡುವಿಲ್ಲದ ಕೆಲಸಗಳ ನಡುವೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ತಮ್ಮ ಹುಟ್ಟುಹಬ್ಬವನ್ನೇ ಮರೆತುಬಿಟ್ಟಿದ್ದರು. ಕಲಾವಿದರ ರಿಹರ್ಸಲ್, ಸಿದ್ಧತೆಗಳ ನಡುವೆ ಖಾಸಗಿ ವಿಷಯಗಳಿಗೆ ಬಿಡುವೆಲ್ಲಿ?

ಫೆಬ್ರವರಿ 28ರ ಶನಿವಾರ ಜಯಮಾಲಾ ಅವರ ಹುಟ್ಟುಹಬ್ಬ. ಮಾರ್ಚ್ 1ರಂದು ಅಮೃತ ಮಹೋತ್ಸವ. ಜಯಮಾಲಾ ತರಾತುರಿಯಲ್ಲಿ ಓಡಾಡುತ್ತಿದ್ದರು. ಎಲ್ಲರೂ ಅವರವರ ಕೆಲಸಗಳಲ್ಲಿ ಮುಳುಗಿದ್ದರೆ ತಾಯಿಯ ಹುಟ್ಟುಹಬ್ಬ ಆಚರಿಸಬೇಕು ಎಂದು ಜಯಮಾಲಾ ಪುತ್ರಿಗೆ ಅನ್ನಿಸಿದೆ. ಕೂಡಲೆ ಸೌಂದರ್ಯ ಅವರು ಕಾರ್ಯಪ್ರವೃತ್ತರಾದರು!

ಜಯಮಾಲಾ ಪುತ್ರಿ ಸೌಂದರ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದರು. ಯಾರೋ ಹುಟ್ಟುಹಬ್ಬದ ಕೇಕ್ ತಂದಿಟ್ಟರು. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ಆತ್ಮೀಯರ ಸಮ್ಮುಖದಲ್ಲಿ ಜಯಮಾಲಾ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಎಲ್ಲವೂ ಸರಳ ಸುಂದರವಾಗಿ ಕೆಲ ನಿಮಿಷಗಳಲ್ಲಿ ಮುಗಿದುಹೋಯಿತು. ನಂತರ ಜಯಮಾಲಾ ಅಮೃತ ಮಹೋತ್ಸವ ಕಾರ್ಯಕ್ರಮಗಳಲ್ಲಿ ಮುಳುಗಿಹೋದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜಯಮಾಲಾ ಪುತ್ರಿ ಲಗೋರಿ ಆಡೊಲ್ಲವಂತೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada