»   »  ನೈಸ್ ರಸ್ತೆಯಲ್ಲಿ ಎಕೆ 56ಕ್ಕೆ ಅದ್ಧೂರಿ ಫೈಟ್ಸ್

ನೈಸ್ ರಸ್ತೆಯಲ್ಲಿ ಎಕೆ 56ಕ್ಕೆ ಅದ್ಧೂರಿ ಫೈಟ್ಸ್

Posted By:
Subscribe to Filmibeat Kannada
ಓಂ ಪ್ರಕಾಶ್ ರಾವ್ ಚಿತ್ರ ಅಂದ ಮೇಲೆ ಅದ್ಧೂರಿ ಫೈಟ್ ಗಳು ಇದ್ದೇ ಇರುತ್ತವೆ. ಇದೀಗ ಅವರ ನಿರ್ದೇಶನದಲ್ಲಿ ಬರುತ್ತಿರುವ 25ನೇ ಚಿತ್ರ ಎಕೆ 56 ಚಿತ್ರಕ್ಕೂ ಭಾರಿ ವೆಚ್ಚದಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿದೆ. ನೈಸ್ ರಸ್ತೆಯಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಫೈಟ್ ಗಳಿಗಾಗಿ ಸುಮಾರು ಒಂದುಕೋಟಿ ರು. ವೆಚ್ಚ ಮಾಡಲಾಗಿದೆ. ಚಿತ್ರದ ಒಟ್ಟು ಬಜೆಟ್ ರು.6 ಕೋಟಿ ಎನ್ನುತ್ತವೆ ಮೂಲಗಳು.

ನೈಸ್ ರಸ್ತೆಯಲ್ಲಿ ಚೇಸಿಂಗ್ ದೃಶ್ಯಗಳನ್ನು ಸೆರೆಹಿಡಿಯಲು ಹೆಲಿಕಾಪ್ಟರನ್ನು ಬಳಕೆ ಮಾಡಿಕೊಳ್ಳಲಾಯಿತು. ಈ ಸಾಹಸ ದೃಶ್ಯಕ್ಕಾಗಿ 50ಕ್ಕೂ ಹೆಚ್ಚ್ಚು ಸಾಹಸ ಕಲಾವಿದರು ಚೆನ್ನೈನಿಂದ ಆಗಮಿಸಿದ್ದಾರೆ. ಛಾಯಾಗ್ರಾಹಕ ಎಸ್. ಮನೋಹರ್ ಈ ಸಾಹಸ ಸನ್ನಿವೇಶಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಈ ಹಿಂದೆ ಲಾಕಪ್ ಡೆತ್, ಕನ್ನಡದ ಕಿರಣ್ ಬೇಡಿ ಚಿತ್ರಗಳಿಗಾಗಿ ಭಾರಿ ವೆಚ್ಚದಲ್ಲಿ ಸಾಹಸ ಸನ್ನಿವೇಶಗಳನ್ನು ಓಂ ಪ್ರಕಾಶ್ ರಾವ್ ಚಿತ್ರೀಕರಿಸಿದ್ದರು. ಪಳನಿ ರಾಜ್ ಅವರ ಸಾಹಸ ನಿರ್ದೇಶನದಲ್ಲಿ ಈ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ಸಿಲ್ವರ್ ಸ್ಕ್ರೀನ್ ಪಿಕ್ಚರ್ ಲಾಂಛನದಲ್ಲಿ ಎಕೆ56 ಚಿತ್ರವನ್ನು ಬಿ. ವೆಂಕಟೇಶ್ ಬಾಬು. ಎಂ. ಗೋವಿಂದರಾಜು ನಿರ್ಮಿಸುತ್ತಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ಚಿತ್ರದಲ್ಲಿ ಸಿದ್ಧಾಂತ, ನಿಖಿತಾ, ಶರತ್ ಬಾಬು, ಸುಮಲತ, ಅವಿನಾಶ್, ಬುಲೆಟ್ ಪ್ರಕಾಶ್, ಅತುಲ್ ಕುಲಕರ್ಣಿ, ಲೋಕನಾಥ್, ಕಿಶೋರಿ ಬಲ್ಲಾಳ್, ಅನಂತವೇಲು, ಸತ್ಯಜಿತ್, ರಮೇಶ್ ಪಂಡಿತ್, ಸಂಗೀತ, ಸುಚಿತ್ರ, ಕೋಟೆ ಪ್ರಭಾಕರ್, ಶಂಕರ್ ನಾರಾಯಣ್ ಮುಂತಾದವರಿದ್ದಾರೆ.

ಇತ್ತೀಚೆಗಷ್ಟೆ ಎಕೆ 56ರ ಚಿತ್ರೀಕರಣ ಬೆಳಗಾವಿಯ ಹಿಂಡರಿಗಿ ಜೈಲು ಮತ್ತು ತುಮಕೂರುನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಮಾಡಲಾಗಿತ್ತು. ನೃತ್ಯ ತ್ರಿಭುವನ್-ಹರ್ಷ, ಸಹ ನಿರ್ದೇಶನ ಸರಿಗಮ ವಿಜಿ - ಸೋಮನಾಥ್, ನಿರ್ವಹಣೆ ಕೆ.ಎಸ್. ಪ್ರಕಾಶ್, ಎಂ. ಪುಟ್ಟಸ್ವಾಮಿ, ಕಾರ್ಯಕಾರಿ ನಿರ್ಮಾಪಕರು, ಕಲೆ, ಇಸ್ಮಾಯಿಲ್-ಶಿವಕುಮಾರ್. ಪರಭಾಷಾ ಚಿತ್ರಗಳ ಮುಂದೆ ನಾವೇನು ಕಡಿಮೆ ಎಂಬಂತೆ ಎಕೆ56 ಚಿತ್ರಕ್ಕೆ ಖರ್ಚು ಮಾಡಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada