»   »  ಶ್ರೀಹರಿಯ ಸವತಿಯರಾದ ಗಾಂಧಿ ಸೋದರಿಯರು

ಶ್ರೀಹರಿಯ ಸವತಿಯರಾದ ಗಾಂಧಿ ಸೋದರಿಯರು

Subscribe to Filmibeat Kannada

ಶ್ರೀಹರಿ ಚಿತ್ರದಲ್ಲಿ ಸಹೋದರಿಯರಾದ ಪೂಜಾ ಗಾಂಧಿ ಹಾಗೂ ರಾಧಿಕಾ ಗಾಂಧಿ ಜತೆಯಾಗಿ ಅಭಿನಯಿಸುತ್ತಿರುವುದು ಗೊತೇ ಇದೆ. ಈ ಚಿತ್ರದಲ್ಲಿ ಅವರಿಬ್ಬರೂ ಸವತಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ಬೆಂಗಳೂರು, ಮಂಗಳೂರು, ಸಕಲೇಶಪುರ, ಮಲ್ಪೆ ಬೀಚ್ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದ್ದಾರೆ.

ಪ್ರಥಮ ಬಾರಿಗೆ ಪೂಜಾ ಗಾಂಧಿ ನೆಗೆಟಿವ್ ರೋಲ್‌ನಲ್ಲಿ ಅಭಿನಯಿಸಿದ್ದು, ನಾಯಕ ಹರಿ ಸುಸಂಸ್ಕೃತ ವ್ಯಕ್ತಿ ಹಾಗೂ ಆತನ ಹೆಂಡತಿ ಪಾತ್ರದಲ್ಲಿ ರಾಧಿಕಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಚಾಮುಂಡೇಶ್ವರಿ ಧ್ವನಿಗ್ರಹಣ ಕೇಂದ್ರದಲ್ಲಿ ಮಾತಿನ ಮರುಲೇಪನ ಕಾರ್ಯ ಕಳೆದ ವಾರದಿಂದ ಪ್ರಾರಂಭವಾಗಿದೆ.

ಎಂ.ಎಲ್. ಪ್ರಸನ್ನ ಅವರ ಸಂಭಾಷಣೆ, ಬಿ. ರಾಕೇಶ್‌ರ ಛಾಯಾಗ್ರಹಣ, ಸಮೀರ್ ಕುಲಕರ್ಣಿರವರ ಸಂಗೀತ ಸಂಯೋಜನೆ, ರೇವಣ್ಣ ಅವರ ಕಲಾನಿರ್ದೇಶನ, ಹರ್ಷ-ಮುರಳಿ ಅವರ ನೃತ್ಯ ಸಂಯೋಜನೆ, ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ನಾಗೇಂದ್ರಪ್ರಸಾದ್, ಶಶಾಂಕ್‌ರ ಸಾಹಿತ್ಯ ರಚನೆ ಈ ಚಿತ್ರಕ್ಕಿದೆ.

ಸಿ.ಕೆ. ಫಿಲಂಸ್ ಹಾಗೂ ಡಿ ಪಿಕ್ಚರ್ಸ್ ಲಾಂಛನದಲ್ಲಿ ಎಸ್.ಎ. ಚಿನ್ನೇಗೌಡ, ಎಂ. ಎನ್. ಕುಮಾರ್ ಹಾಗೂ ದಯಾಳ್ ಪದ್ಮನಾಭನ್ ಸೇರಿ ನಿರ್ಮಿಸುತ್ತಿದ್ದಾರೆ. ಕಥೆ-ಚಿತ್ರಕಥೆ-ನಿರ್ದೇಶನ ದಯಾಳ್ ಪದ್ಮನಾಭನ್ ಅವರದಾಗಿದೆ. ಶ್ರೀಮುರಳಿ, ರಾಧಿಕಾ ಗಾಂಧಿ, ಪೂಜಾ ಗಾಂಧಿ, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಅಚ್ಯುತ್, ಪದ್ಮಜಾ ರಾವ್, ನವೀನ್ ಕೃಷ್ಣ, ಶರಣ್, ನಾಗಶೇಖರ್, ಸಂಗೀತಾ, ಶೋಭಾ ನಾಯ್ಡು, ಶ್ರೀನಿವಾಸಮೂರ್ತಿ, ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada