For Quick Alerts
  ALLOW NOTIFICATIONS  
  For Daily Alerts

  'ಬಸವಿ' ಪದ್ಧತಿ ಮೇಲೆ ಬೆಳಕು ಚೆಲ್ಲುವ 'ಇಜ್ಜೋಡು'

  By Staff
  |

  ಖ್ಯಾತ ನಿರ್ದೇಶಕ ಎಂ ಎಸ್ ಸತ್ಯು ಸುದೀರ್ಘ 15 ವರ್ಷಗಳ ಬಳಿಕ 'ಇಜ್ಜೋಡು' ಚಿತ್ರದೊಂದಿಗೆ ಮರಳಿದ್ದಾರೆ. ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ.

  ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಇಜ್ಜೋಡು' ಚಿತ್ರ ಪ್ರಥಮ ಪ್ರದರ್ಶನ ಕಂಡಿತು. ಕರ್ನಾಟಕದಲ್ಲಿ ಆಚರಣೆಯಲ್ಲಿರುವ 'ಬಸವಿ' ಪದ್ದ್ಧತಿಯಲ್ಲಿ ಬಸವಿಯರು ಅಪಮೌಲ್ಯಕ್ಕೊಳಗಾಗಿ ವೇಶ್ಯೆಯರಾಗಿ ಬದಲಾಗುತ್ತಿರುವ ಕಥಾಹಂದರವನ್ನು 'ಇಜ್ಜೋಡು' ಚಿತ್ರ ಹೊಂದಿದೆ.

  ಬಳ್ಳಾರಿ ಜಿಲ್ಲೆಯೊಂದರಲ್ಲಿ 1000 ಬಸವಿಯರನ್ನು ಬಲವಂತವಾಗಿ ವೇಶ್ಯೆಯರನ್ನಾಗಿಸುತ್ತಿರುವ ಅಂಶ ಎರಡು ವರ್ಷಗಳ ಹಿಂದೆ ಬೆಳಕು ಕಂಡಿತು. ಸರ್ಕಾರೇತರ ಸಂಸ್ಥೆಯೊಂದು ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿತು. ನನಗೆ ದೊರೆತ ಈ ಮಾಹಿತಿ ಇಜ್ಜೋಡು ಚಿತ್ರವನ್ನು ನಿರ್ದೇಶಿಸುವಂತೆ ಮಾಡಿತು ಎಂದು ಚಿತ್ರ ಪ್ರದರ್ಶನದ ಬಳಿಕ ಸತ್ಯ್ಯು ತಿಳಿಸಿದ್ದಾರೆ.

  ಕರ್ನಾಟಕದ ಸುಂದರ ಸ್ಥಳಗಳಲ್ಲಿ ಇಜ್ಜೋಡು ಚಿತ್ರ ಚಿತ್ರೀಕರಣಗೊಂಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಟಿ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಅನಿರುದ್ಧ್, ಶ್ರೀವತ್ಸ, ನಾಗಕಿರಣ್, ಅರುಂಧತಿ ಜತ್ಕರ್ ಸಹ ನಟಿಸಿದ್ದಾರೆ. ಬಸವಿ ಪದ್ಧತಿ ಬಗ್ಗೆ ನೇರವಾಗಿ ಪ್ರಸ್ತಾಪಿಸದೆ ನಂಬಿಕೆ ಮತ್ತು ಅಪನಂಬಿಕೆ ಕುರಿತ ಚರ್ಚೆಗೆ ಕಲಾತ್ಮಕ ರೀತಿಯಲ್ಲಿ ಕತೆಗೆ ತಿರುವು ನೀಡಿದ್ದಾರೆ ಸತ್ಯು. ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸಿದ ಮೊದಲ ಕನ್ನಡ ಚಿತ್ರ ಇದಾಗಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X