»   » ಈ ವಾರ ತೆರೆಗೆ ಜಗ್ಗೇಶ್, ರಿಚರ್ಡ್ ಲೂಯಿಸ್ ದುಡ್ಡೇ ದೊಡ್ಡಪ್ಪ

ಈ ವಾರ ತೆರೆಗೆ ಜಗ್ಗೇಶ್, ರಿಚರ್ಡ್ ಲೂಯಿಸ್ ದುಡ್ಡೇ ದೊಡ್ಡಪ್ಪ

Posted By:
Subscribe to Filmibeat Kannada

ಇಬ್ಬರು ಹಾಸ್ಯ ಕಲಾವಿದರು ಕೈಜೋಡಿಸಿದರೆ ಸಿನಿಮಾ ಹೇಗಿರುತ್ತದೆ? ಹೊಟ್ಟೆ ಹುಣ್ಣಾಗುತ್ತದೆ. ಈ ವಾರ (ಆ.5) ಅದನ್ನೇ ಮಾಡಲು ಬರುತ್ತಿದ್ದಾರೆ ರಿಚರ್ಡ್ ಲೂಯಿಸ್ ಹಾಗೂ ನವರಸ ನಾಯಕ ಜಗ್ಗೇಶ್, 'ದುಡ್ಡೇ ದೊಡ್ದಪ್ಪ' ಚಿತ್ರದ ಮೂಲಕ. ಕತೆ ರಿಚರ್ಡ್ ಲೂಯಿಸ್ ಅವರದು ನಟನೆ ಜಗ್ಗೇಶ್‌ ಅವರದು.

ಹಾಸ್ಯ ಕಲಾವಿದ, ಉದಯ ಟಿವಿಯ ಹರಟೆ ಮಲ್ಲ ರಿಚರ್ಡ್ ಲೂಯಿಸ್ ಕತೆ ಬರೆದಿರುವ 'ದುಡ್ಡೇ ದೊಡ್ಡಪ್ಪ' ಚಿತ್ರ ಈ ವಾರ ರಾಜ್ಯದಾದ್ಯಂತೆ ತೆರೆಕಾಣುತ್ತಿದೆ. ಎಂ.ಎಸ್.ರಾಜಶೇಖರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಜಗ್ಗೇಶ್ ಅಭಿನಯಿಸಿದ್ದಾರೆ. ಲಹರಿ, ಮೋಹನ್, ಪವಿತ್ರಾಲೋಕೇಶ್, ಬ್ಯಾಂಕ್ ಜನಾರ್ದನ್, ಗಿರಿಜಾಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಮೇಗಾಹಿಟ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎ.ಗಣೇಶ್ ಹಾಗೂ ನಾರಾಯಣ್.ಜೆ ನಿರ್ಮಿಸಿರುವ ಚಿತ್ರ ಇದು. ಸಾಧುಕೋಕಿಲಾ ಸಂಗೀತ ನೀಡಿರುವ ಈ ಚಿತ್ರಕ್ಕೆ ಆರ್.ಜನಾರ್ದನ್ ಅವರ ಛಾಯಾಗ್ರಹಣವಿದೆ. ಮನೋಹರ್ ಸಂಕಲನವಿರುವ 'ದುಡ್ಡೇ ದೊಡ್ಡಪ್ಪ' ಚಿತ್ರಕ್ಕೆ ರಿಚರ್ಡ್ ಲೂಯಿಸ್ ಕಥೆ ಬರೆದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada movie Dudde Doddappa set to release on 5th August. Udaya TV Harate Malla Mr.Richard Louis from Bangalore, a prominent comedian known to provide good doze of laughter of medicine has written the story of the film. Actor Jaggesh has played lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada