»   » ಮೈಸೂರಿನಲ್ಲಿ ರಾಧಿಕಾ 'ಗಾನ ಬಜಾನ'

ಮೈಸೂರಿನಲ್ಲಿ ರಾಧಿಕಾ 'ಗಾನ ಬಜಾನ'

Posted By:
Subscribe to Filmibeat Kannada

'ಗಾನ ಬಜಾನ' ಚಿತ್ರಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ನಿಮ್ಮ ಸಿನಿಮಾ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ದ್ವಿತೀಯ ಚಿತ್ರ ಇದಾಗಿದೆ. ಕವಿರಾಜ್ ರಚನೆಯ 'ಹೊಸದೊಂದು ಹೆಸರಿಡು ನನಗೆ - ನಿನಗಿಷ್ಟವಾಗುವ ಹಾಗೆ. ಮುದ್ದಾಗಿ ಅದರಲೆ ನನ್ನ ಕರೆಯೆ...' ಎಂಬ ಗೀತೆ ಮೈಸೂರು ಹಾಗೂ ಅದರ ಸುತ್ತಮುತ್ತ ಚಿತ್ರೀಕರಣಗೊಂಡಿದೆ.

ತರುಣ್ ಹಾಗೂ ರಾಧಿಕಾ ಪಂಡಿತ್ ಅಭಿನಯಿಸಿದ ಈ ಗೀತೆಗೆ ಮೇಹರ್ ನೃತ್ಯ ನಿರ್ದೇಶನ ಮಾಡಿದರು. ಹಿಂದೆ ಈ ಸಂಸ್ಥೆಯಿಂದ ನಿರ್ಮಾಣವಾದ 'ಲವ್‌ಗುರು' ಚಿತ್ರ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಚಿತ್ರದಲ್ಲಿದ್ದ ಬಹುತೇಕ ಚಿತ್ರತಂಡದ ಸದಸ್ಯರು ಈ ಚಿತ್ರದಲ್ಲೂ ಇದ್ದಾರೆ ಎಂದು ನಿರ್ಮಾಪಕ ನವೀನ್ ತಿಳಿಸಿದ್ದಾರೆ.

ಪ್ರಶಾಂತ್‌ರಾಜ್ ನಿರ್ದೇಶನದ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಅವರ ಸಂಗೀತವಿದೆ. ಶೇಖರ್ ಛಾಯಾಗ್ರಹಣ, ಧನಂಜಯ್ ಸಂಭಾಷಣೆ, ಇಸ್ಮಾಯಿಲ್ ಕಲಾನಿರ್ದೇಶನ ಹಾಗೂ ರವಿಶಂಕರ್, ನರಸಿಂಹ ಅವರ ನಿರ್ಮಾಣನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ತರುಣ್, ರಾಧಿಕಾಪಂಡಿತ್, ದಿಲೀಪ್‌ರಾಜ್, ಮಂಜುನಾಥ್‌ಹೆಗ್ಡೆ, ಯಶವಂತ್‌ಸರ್‌ದೇಶಪಾಂಡೆ, ಶರಣ್, ಸಿ.ಆರ್.ಸಿಂಹ, ಲಲಿತಾ, ಲಕ್ಷ್ಮೀದೇವಮ್ಮ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada