»   » ಉಗಾದಿಗೆ 'ಹೂ' ಮಕರಂದ ಹೀರಲು ರೆಡಿನಾ

ಉಗಾದಿಗೆ 'ಹೂ' ಮಕರಂದ ಹೀರಲು ರೆಡಿನಾ

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಹೂ' ಚಿತ್ರ ಉಗಾದಿ (ಮಾರ್ಚ್ 16)ಹಬ್ಬದ ದಿನ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಕ್ರೇಜಿ ಸ್ಟಾರ್ ಅಭಿಮಾನಿಗಳು ರವಿಯೊಂದಿಗೆ ಮೋಹಕ ತಾರೆಗಳಾದ ನಮಿತಾ, ಮೀರಾ ಜಾಸ್ಮಿನ್ ರನ್ನು ಕಾಣಲು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಆ ನಿರೀಕ್ಷೆಗಳಿಗೆ ದಿನಗಣನೆ ಪ್ರಾರಂಭವಾಗಿದೆ.

ಉದಯ ವಾಹಿನಿ ನೇರ ಪ್ರಸಾರದಲ್ಲಿ ಬಿಡುಗಡೆಯಾದ 'ಹೂ' ಚಿತ್ರದ ಧ್ವನಿಸುರುಳಿಗಳು ಈಗಾಗಲೇ ಬಿಸಿ ದೋಸೆಯಂತೆ ಬಿಕರಿಯಾಗಿವೆ. ತೆಲುಗಿನ ಯಶಸ್ವಿ ಚಿತ್ರ 'ವಸಂತಂ' ಚಿತ್ರದ ರೀಮೇಕ್ ಇದಾಗಿದೆ. ಮತ್ತೊಂದು ಬ್ರೇಕ್ ಗಾಗಿ ಕಾಯುತ್ತಿರುವ ರವಿಚಂದ್ರನ್ 'ಹೂ 'ಚಿತ್ರದ ಬಗ್ಗೆ ಅಪಾರ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

ಚಿತ್ರದಲ್ಲಿ ರವಿಂಚಂದ್ರನ್ ಪತ್ನಿಯಾಗಿ ನಮಿತಾ ಹಾಗೂ ಬಾಲ್ಯದ ಗೆಳತಿಯಾಗಿ ಮೀರಾ ಜಾಸ್ಮಿನ್ ಕಾಣಿಸಲಿದ್ದಾರೆ. ನಮಿತಾ ಅವರದು ಸೌಂದರ್ಯ ಪ್ರದರ್ಶನದ ಜೊತೆಗೆ ಅಭಿನಯಕ್ಕೆ ಒತ್ತು ನೀಡುವ ಪಾತ್ರ. ನಿರ್ದೇಶನದ ಜೊತೆಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ ರವಿ.

ಸೀರೆ ಉಟ್ಟುಕೊಂಡಿದ್ದ ನಮಿತಾ ಬಂಧನ

'ಹೂ' ಚಿತ್ರಕ್ಕಾಗಿ ದಿನೇಶ್ ಗಾಂಧಿ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್ ಒಂದಕ್ಕೆ ಬರೋಬ್ಬರಿ ರು.50ಲಕ್ಷದಲ್ಲಿ ಸುರಿದದ್ದದ್ದೇ ಇದಕ್ಕೆ ನಿದರ್ಶನ. ವಿ ಹರಿಕೃಷ್ಣ ಸಂಗೀತ, ಜಿಎಸ್ ವಿ ಸೀತಾರಾಂ ಅವರ ಕ್ಯಾಮೆರಾ ಕೈಚಳಕ ಚಿತ್ರದ ಪ್ರಮುಖ ಆಕರ್ಷಣೆ.

ನಮಿತಾ, ಮೀರಾ ಜಾಸ್ಮಿನ್ ಕಣ್ಣು ಕುಕ್ಕುವ ತಾರೆಗಳ ನಡುವೆ ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮತ್ತ್ತು ಶರಣ್ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ ಎಂಬುದನ್ನು ಅರಿಯಲು ಮಾರ್ಚ್ 16ರ ಯುಗಾದಿ ಹಬ್ಬದ ತನಕ ಕಾಯಲೇ ಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada