»   »  2008ರಲ್ಲಿ ಮಿಂಚಿದ ಕನ್ನಡದ ಪಂಚ ನಟಿಯರು

2008ರಲ್ಲಿ ಮಿಂಚಿದ ಕನ್ನಡದ ಪಂಚ ನಟಿಯರು

Subscribe to Filmibeat Kannada

2008ರ ವರ್ಷದ ಉದ್ದಕ್ಕೂ ಅನೇಕ ಹೊಸ ನಟಿಯರ ಮುಖಗಳು ಕಾಣಿಸಿಕೊಂಡಿವೆ. ಅದರಲ್ಲಿ ಕೆಲ ಗಟ್ಟಿ ಕಾಳುಗಳು ಅಷ್ಟೂ ಇಷ್ಟೂ ಹೆಸರು ಮಾಡಿದರೆ, ಇನ್ನು ಕೆಲವರು ಒಂದೇ ಚಿತ್ರಕ್ಕೆ ನಾಪತ್ತೆಯಾದರು. ಇನ್ನು ಹಲವರು ಎಲ್ಲವೂ ಇದ್ದೂ ಅವಕಾಶಗಳಿಂದ ವಂಚಿತರಾದರು. ಅವಕಾಶ ವಂಚಿತರಲ್ಲಿ ಪ್ರಮುಖ ಹೆಸರುಗಳೆಂದರೆ, ರಾಧಿಕಾ ಪಂಡಿತ, ಶುಭ ಪುಂಜಾ, ನೆನಪಿರಲಿ ವರ್ಷಾ, ಗಾಳಿಪಟದ ಭಾವನಾರಾವ್. ಹಳೆಯ ಮುಖಗಳಾದ ಭಾವನಾ, ಛಾಯಾ ಸಿಂಗ್ ಅವರನ್ನು ಕನ್ನಡ ಚಿತ್ರರಂಗ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು.

2008ರ ವರ್ಷದಲ್ಲಿ ಅಗ್ರಪಟ್ಟವನ್ನು ಪಂಜಾಬಿ ಬೆಡಗಿ, ಮುಂಗಾರುಮಳೆ ನಂದಿನಿ ಅಲಿಯಾಸ್ ಪೂಜಾ ಗಾಂಧಿ ಅಲಂಕರಿಸಿದ್ದಾರೆ. ಪಂಜಾಬಿನವರಾದರೂ ಕೆಲವೆ ದಿನಗಳಲ್ಲಿ ಕನ್ನಡವನ್ನು ಕಲಿತು, ಕರ್ನಾಟಕದಾದ್ಯಂತ ಮನೆಮಾತಾದ ಪೂಜಾ ಈ ವರ್ಷದ ಜನಪ್ರಿಯ ನಟಿಯರಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅವರ ನಟನೆಯ ತಾಜ್ ಮಹಲ್ ಚಿತ್ರ ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಅಲ್ಲದೆ ಪೂಜಾ ಗಾಂಧಿ ಅವರು ಅಕ್ಸಿಡೆಂಟ್, ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ಬುದ್ಧಿವಂತ ಹಾಗೂ ಮಹರ್ಷಿ ಚಿತ್ರದಲ್ಲಿ ನಟಿಸಿದ್ದಾರೆ.

ಎರಡನೇ ಸ್ಥಾನವನ್ನು ಈ ವರ್ಷದಲ್ಲಿ ಮೂರು ಚಿತ್ರದ ನಾಯಕಿಯಾಗಿರುವ ರಮ್ಯಾ ಪಡೆದುಕೊಂಡಿದ್ದಾರೆ. ಸುದೀಪ್ ನಾಯಕ ಹಾಗೂ ರಮ್ಯಾ ನಾಯಕಿಯಾಗಿ ನಟಿಸಿದ ಮುಸ್ಸಂಜೆ ಮಾತು ಈ ವರ್ಷದ ಹಿಟ್ ಚಿತ್ರವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಬೊಂಬಾಟ್ ಹಾಗೂ ಅಂತೂ ಇಂತೂ ಪ್ರೀತಿ ಬಂತು ಚಿತ್ರಗಳು ಸಾಧಾರಣವಾಗಿದ್ದವು.

ವಂಶಿ ಚಿತ್ರದ ನಾಯಕಿ ನಿಖಿತಾ ಕನ್ನಡ ಅತ್ಯುತ್ತಮ ನಟಿಯರಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಅವರು ನಟಿಸಿದ್ದು ಒಂದೇ ಚಿತ್ರವಾದರೂ ಜನಮಾನಸದಲ್ಲಿ ಉಳಿಯುವಂತೆ ನಟಿಸಿದ್ದಾರೆ ಎನ್ನುತ್ತದೆ ಗಾಂಧಿನಗರ. ನಾಲ್ಕನೇ ಸ್ಥಾನದಲ್ಲಿ ಮಳೆಯಾಳಿ ಬೆಡಗಿ ಗಜ ಚಿತ್ರದ ನಟಿ ನವ್ಯಾ ನಾಯರ್ ಇದ್ದಾರೆ. ಇದಲ್ಲದೇ ನವ್ಯಾ ನಾಯರ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಮ್ ಯಜಮಾನ್ರು ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಮೆರವಣಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅಂದ್ರಿತಾ ರೇ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರ ವಾರ್ತೆ)


2008ರ ಉತ್ತಮ ಕನ್ನಡ ನಿರ್ದೇಶಕ ಯಾರು?
ಸ್ಯಾಂಡಲ್‌ವುಡ್ 2008 ಗೋಚಾರಫಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada