For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಸೂಪರ್ ಟಿಕೆಟ್‌ಗಳಿಗೆ ಪ್ರೇಕ್ಷಕರ ಪರದಾಟ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಸೂಪರ್' ಚಿತ್ರ ಶುಕ್ರವಾರ (ಡಿ.3) ತೆರೆಗೆ ಅಪ್ಪಳಿಸುತ್ತಿದೆ. ಗುರುವಾರದಿಂದಲೇ ಚಿತ್ರಮಂದಿರಗಳಲ್ಲಿ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದ್ದು ಪ್ರೇಕ್ಷಕರು ಟಿಕೆಟ್‌ಗಾಗಿ ಪರದಾಡುವ ಸನ್ನಿವೇಶ ಕೆ ಜಿ ರಸ್ತೆಯ ಚಿತ್ರಮಂದಿರಗಳ ಮುಂದೆ ಸಾಮಾನ್ಯವಾಗಿತ್ತು.

  'ಸೂಪರ್' ಚಿತ್ರ ಬಿಡುಗಡೆಯಾಗಿರುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಗುರುವಾರ ಸಂಜೆ 5.30ರಿಂದಲೇ ಟಿಕೆಟ್‌ಗಳ ಮಾರಾಟ ಆರಂಭವಾಯಿತು. ಶುಕ್ರವಾರದ ನಾಲ್ಕೂ ಪ್ರದರ್ಶನಗಳ ಟಿಕೆಟ್‌ಗಳು ಮಂಗಳೂರು ಬಜ್ಜಿಗಳಂತೆ ಮಾರಾಟವಾಗಿವೆ. ಕೆಲವು ಪ್ರೇಕ್ಷಕರು ಟಿಕೆಟ್ ಸಿಗದೆ ಪೆಚ್ಚು ಮೋರೆ ಹಾಕಿಕೊಂಡು ಮನೆಕಡೆಗೆ ಹೆಜ್ಜೆ ಹಾಕುತ್ತಿದ್ದರು.

  ಇಂದು ಮುಂಜಾನೆಯಿಂದಲೇ ಪ್ರೇಕ್ಷಕರು 'ಸೂಪರ್' ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ನಿಂತಿದ್ದರು. ಮೊದಲ ದಿನ ಮೊದಲ ಶೋ ನೋಡಬೇಕು ಎಂಬುದು ಬಹುತೇಕ ಅಭಿಮಾನಿಗಳ ಆಸೆಯಾಗಿತ್ತು. ಐನಾಕ್ಸ್, ಪಿವಿಆರ್‌ನಂತಹ ಚಿತ್ರಮಂದಿರಗಳಲ್ಲಿ ಈಗಾಗಲೆ ಅಡ್ವಾನ್ಸ್ ಬುಕ್ಕಿಂಗ್ ಸಹ ಮುಗಿದಿದೆ ಎನ್ನಲಾಗಿದೆ.

  ವಿಶಿಷ್ಟ ಚಿಹ್ನೆಗಳ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನಸೆಳೆದಉಪೇಂದ್ರ, ಹತ್ತು ವರ್ಷಗಳ ಬಳಿಕ ಮತ್ತೆ ಹಳೆ ತಂತ್ರಕ್ಕೆ ಮರಳಿದ್ದಾರೆ. ಈ ಬಾರಿ ಅವರ ತಂತ್ರ ಫಲಿಸುತ್ತದೋ ಇಲ್ಲವೋ ಎಂಬುದು ಗೊತ್ತಾಗಬೇಕಾದರೆ ಶುಕ್ರವಾರದ ತನಕ ಕಾಯಬೇಕು. ಅಂದಹಾಗೆ ಕಾಳಸಂತೆಯಲ್ಲಿ 'ಸೂಪರ್' ಟಿಕೆಟ್‌ಗಳು ಭರ್ಜರಿಯಾಗಿ ಬಿಕರಿಯಾಗುತ್ತಿವೆ. ಶುಕ್ರವಾರ ಸಂಜೆ ವೇಳೆಗೆ ನಿಮ್ಮ ದಟ್ಸ್ ಕನ್ನಡದಲ್ಲಿ ಸೂಪರ್ ಚಿತ್ರದ ವಿಮರ್ಶೆ ಪ್ರಕಟವಾಗಲಿದೆ, ನಿರೀಕ್ಷಿಸಿ.

  English summary
  Upendra and Nayantara lead Kannada movie is releasing on Dec 3. Sagar theater (K G Road, Bangalore) has given advance ticket one day before the release of the movie. Advanced booking started at 5.30 pm and within few hours all shows tickets got sold out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X