»   » ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾನಕ್ಕೆ ಜಯಮಾಲಾ

ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾನಕ್ಕೆ ಜಯಮಾಲಾ

Posted By:
Subscribe to Filmibeat Kannada

ಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಬಗ್ಗೆ ಹಲವಾರು ಹೆಸರುಗಳು ಕೇಳಿಬಂದಿವೆ. ಅದರಲ್ಲಿ ಪ್ರಮುಖವಾಗಿ ಕೇಳಿಬಂದಿರುವ ಹೆಸರುಗಳಲ್ಲಿ ನಟಿ ತಾರಾ ಅವರ ಹೆಸರೂ ಒಂದು.

ಆದರೆ ನಟಿ ತಾರಾ ಅವರಿಗಿಂತಲೂ ಗಿರಿಕನ್ಯೆ ಜಯಮಾಲಾ ಅವರು ಸಮರ್ಥರು ಎಂಬ ಮಾತುಗಳು ಕೇಳಿಬಂದಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಟಿ ಜಯಮಾಲಾ ಅಲಂಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಈಗಾಗಲೆ ಜಯಮಾಲಾ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಜೊತೆ ನಿಷ್ಠೆಯಿಂದದ್ದರೂ ಗಿರಿಕನ್ಯೆಯನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ತೆರೆಮರೆಯ ಕಸರತ್ತುಗಳು ನಡೆಯುತ್ತಿವೆ. ಎಷ್ಟೇ ಆಗಲಿ, ಜಯಮಾಲಾ ಅವರು ಸದಾನಂದ ಗೌಡರ ಊರಿನ ಕಡೆಯವರಲ್ಲವೇ! ಎಂಚಿನ ಮಾರಾಯ್ರೆ.

ಚಲನಚಿತ್ರ ಅಕಾಡೆಮಿ ಸ್ಥಾಪನಯಾದ ಹೊಸದರಲ್ಲೇ ಅಧ್ಯಕ್ಷ ಸ್ಥಾನಕ್ಕೆ ಡಾ.ಜಯಮಾಲಾ ಹೆಸರು ಕೇಳಿಬಂದಿತ್ತು. ಜೊತೆ ಜೊತೆಗೆ ಗಿರೀಶ್ ಕಾಸರವಳ್ಳಿ, ಎಸ್. ರಾಮಚಂದ್ರ, ಎಂ. ಭಕ್ತವತ್ಸಲ, ವಿ. ಎನ್ . ಸುಬ್ಬರಾವ್ ಹೆಸರುಗಳೂ ಚಾಲ್ತಿಯಲ್ಲಿದ್ದವು. ಆದರೆ ಕಡೆಗೆ ಟಿ ಎಸ್ ನಾಗಾಭರಣ ಅವರ ಪಾಲಾಗಿತ್ತು ಅಧ್ಯಕ್ಷ ಸ್ಥಾನ. ಅಕಾಡೆಮಿ ಅಧ್ಯಕ್ಷರ ಅವಧಿ 3 ವರ್ಷ.

ಹಳೆ ಮತ್ತು ಹೊಸ ತಲೆಮಾರಿನ ಹಳತಾಗದ ಕೊಂಡಿಯಂತಿರುವ ಜಯಮಾಲಾ ಅವರು ಅಧ್ಯಕ್ಷರಾದರೆ ಅಕಾಡೆಮಿಯನ್ನು ಸಮರ್ಥವಾಗಿ ಮುನ್ನುಗ್ಗಿಸುತ್ತಾರೆ. ಅಕಾಡೆಮಿಗೆ ಹೊಸ ಗ್ಲಾಮರ್ ತರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಯಾಕಾಗಬಾರದು ಎಂಬ ಮಾತುಗಳು ಪ್ರಬಲವಾಗಿವೆ. (ಒನ್‌ಇಂಡಿಯಾ ಕನ್ನಡ)

English summary
Actress Dr.Jayamala may probably choosen as next Karnataka Chalanachitra Academy president. Earlier Kannada actress Tara name has been listened
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada