»   »  ವಿಕಲಚೇತನ ಮಗುವಿಗೆ ನಗು ತರಿಸಿದಗಣೇಶ್

ವಿಕಲಚೇತನ ಮಗುವಿಗೆ ನಗು ತರಿಸಿದಗಣೇಶ್

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಬೌದ್ಧಿಕ ವಿಕಲಚೇತನ ಮಗುವೊಂದರ ಜತೆ ಗಣೇಶ್ ಮೂರು ಗಂಟೆಗೂ ಅಧಿಕ ಕಾಲ ಕಳೆದರು. ಮುಂಗಾರು ಮಳೆ ಹಾಡುಗಳನ್ನು ಕೇಳಿಸಿ ಮಗುವಿನ ಮುಖದಲ್ಲಿ ನಗು ಮೂಡಿಸಿದರು. ಹಿಂತಿರುಗುವಾಗ ಆ ಮಗು ಗಣೇಶ್ ರ ಕೈಯನ್ನು ಗಟ್ಟಿಯಾಗಿ ಹಿಡಿದಾಗ ಗಣೇಶ್ ಕಣ್ಣಾಲಿಗಳು ತುಂಬಿ ಬಂದವು. 'ಆಹಾ ಎಂಥ ಕೈಗಡಿಯಾರ'ಎಂದು ಗಣೇಶ್ ಕಣ್ಣೊರೆಸಿಕೊಂಡರು!

ನಂತರ ಸಂಜೆ ವಿಡ್ಸಂರ್ ಮ್ಯಾನರ್ ಹೋಟೆಲ್ ನಲ್ಲಿ ಮಗಳು ಚಾರಿತ್ಯ್ರ ಮತ್ತು ಹೆಂಡತಿ ಶಿಲ್ಪಾ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಗಳು ಚಾರಿತ್ರ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವರ್ಷದ ಹುಟ್ಟುಹಬ್ಬದ ಜೊತೆಗೆ ಗೋಲ್ಡನ್ ಮೂವೀಸ್ ಸಹ ಆರಂಭ ಮಾಡುತ್ತಿದ್ದೇನೆ. ಕಿರುತೆರೆಯಿಂದಲೂ ಇಲ್ಲಿಯವರೆಗೆ ನನ್ನನ್ನು ಪ್ರೋತ್ಸಾಹಿಸುತ್ತಿದ್ದೀರಿ. ಮುಂದೆಯೂ ನಿಮ್ಮ ಆಶೀರ್ವಾದ ಹೀಗೇ ಇರಲಿ ಎಂದು ಗಣೇಶ್ ವಿನಂತಿಸಿಕೊಂಡರು.

ಬೆಂಗಳೂರು ನಗರ ಪೊಲೀಸ್ ಕಮೀಷನರ್ ಶಂಕರ ಬಿದರಿ ಹುಟ್ಟುಹಬ್ಬಕ್ಕೆ ಆಗಮಿಸಿದಮೊದಲ ಅತಿಥಿಯಾಗಿದ್ದರು. ನಂತರ ಡಾ.ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ದರ್ಶನ್, ಪ್ರೇಮ್ ಕುಮಾರ್, ಪ್ರಿಯಾಂಕ ಉಪೇಂದ್ರ, ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಮಧ್ಯರಾತ್ರಿ ತನಕ ಗಣೇಶ್ ಅತಿಥಿಗಳೊಂದಿಗೆ ವಿಡ್ಸರ್ ಮ್ಯಾನರ್ ನಲ್ಲಿ ಕಳೆದರು.

ತುಂತುರು ಮಳೆಯ ಕಾರಣ ಬಹಳಷ್ಟು ಕಲಾವಿದರು ಹುಟ್ಟುಹಬ್ಬಕ್ಕೆ ಬರಲು ಸಾಧ್ಯವಾಗಲಿಲ್ಲ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಎಸ್ ವಿ ಬಾಬು, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಶಿವಮಣಿ, ಗುರುಕಿರಣ್, ದಿನಕರ್, ಪ್ರೀತಂಗುಬ್ಬಿ, ದಿಗಂತ್, ವಿ ಹರಿಕೃಷ್ಣ, ಕವಿರಾಜ್ ಸಹ ಗಣೇಶ್ ಸಂಭ್ರಮಕ್ಕೆ ಜತೆಯಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada