»   » ಮದುವೆಮನೆಯಲ್ಲಿ ಸವಾಲಿಗೆ ಪ್ರತಿಸವಾಲು

ಮದುವೆಮನೆಯಲ್ಲಿ ಸವಾಲಿಗೆ ಪ್ರತಿಸವಾಲು

Posted By:
Subscribe to Filmibeat Kannada

'ಮದುವೆಮನೆ'ಗೆ ವಧು ಪ್ರವೇಶ ಮಾಡಬೇಕು ಆದರೆ ಆಕೆ ಬೇರೊಬ್ಬನಿಂದ ಬಂಧಿತಳಾಗಿರುತ್ತಾಳೆ. ಈ ವಿಷಯವನ್ನು ಅರಿತ ನಾಯಕ ಆಕೆಯನ್ನು ಬಂಧಿಸಿರುವ ವ್ಯಕ್ತಿಯ ಬಳಿ ಬಂದು ''ವಧುವನ್ನು ನೀನೇ ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಬರಬೇಕು. ಹಾಗೇ ಮಾಡ್ತೀಯಾ ನೋಡು'' ಎಂದು ಸವಾಲು ಹಾಕುತ್ತಾನೆ. ಬಂಧಿಸಿರುವ ವ್ಯಕ್ತಿ ಕೂಡ ನಾಯಕನಿಗೆ ಪ್ರತಿ ಸವಾಲು ಹಾಕುತ್ತಾನೆ.

ಈ ಸನ್ನಿವೇಶವನ್ನು 'ಮದುವೆಮನೆ' ಚಿತ್ರಕ್ಕಾಗಿ ನಿರ್ದೇಶಕ ಸುನೀಲ್‌ಕುಮಾರ್ ಸಿಂಗ್ ರಾಮೋಹಳ್ಳಿ ಬಳಿಯ ಜಿ.ವಿ ಅಯ್ಯರ್ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಂಡರು. ಗಣೇಶ್, ಅವಿನಾಶ್(ಜುಗಾರಿ) ಈ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಜೆ.ಜೆ ಇಂಟರ್ ನ್ಯಾಷನಲ್ ಸಂಸ್ಥೆಯ ಮೂಲಕ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ 'ಮದುವೆಮನೆ' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಗಣೇಶ್, ಅವಿನಾಶ್(ಜುಗಾರಿ), ಶ್ರದ್ಧಾಆರ್ಯ, ತಬಲನಾಣಿ, ಅರವಿಂದ್, ಶರಣ್ ಮುಂತಾದವರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಕಲಾವಿದರು.ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತವಿದೆ. ಶೇಖರ್‌ಚಂದ್ರು ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ರವಿವರ್ಮ ಸಾಹಸ, ಮೋಹನ್ ಬಿ ಕೆರೆ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಗಣೇಶ್, ಅವಿನಾಶ್(ಜುಗಾರಿ), ಶ್ರದ್ಧಾಆರ್ಯ, ತಬಲನಾಣಿ, ಶರಣ್, ಅರವಿಂದ್, ಹನುಮಂತೇಗೌಡ, ಕೆ.ವಿ.ನಾಗೇಶ್‌ಕುಮಾರ್, ಎಂ.ಎನ್.ಎಂ. ಚಿತ್ಕಲಾ, ಡಾ:ನಾಗೇಶ್, ಜಾದವ್‌ಮೈಸೂರು, ಚಿನ್ನ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada