For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗ ಇಂದು ಮತ್ತು ನಾಳೆ ಒಂದು ಚರ್ಚೆ

  By Staff
  |
  ಕನ್ನಡ ವಾಕ್ಚಿತ್ರದ 75ನೇ ವರ್ಷದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗ ಇಂದು ಮತ್ತು ನಾಳೆ' ಎಂಬ ವಿಷಯದ ಬಗ್ಗೆ ನಟ, ನಿರ್ಮಾಪಕ, ನಿರ್ದೇಶಕರಿಂದ ಹೊರಹೊಮ್ಮಿದ ವಿಚಾರಧಾರೆಗಳು ಅವರವರ ಮಾತುಗಳಲ್ಲಿ.

  ಅನಂತನಾಗ್: ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾರಾಟಗಾರರೆಲ್ಲಾ ಕನ್ನಡ ಚಿತ್ರ ನಿರ್ಮಾಪಕರಾದರೆ ತಪ್ಪೇನು ಇಲ್ಲ.ಅರುವತ್ತರ ದಶಕದ ಚಿತ್ರ ವಿತರಣೆ ಮತ್ತು ನಿರ್ಮಾಣಕ್ಕೆ ಹೋಲಿಸಿದರೆ ತೊಂಬತ್ತರ ದಶಕದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಉತ್ತಮ ಗುಣಮಟ್ಟದ ಚಿತ್ರಗಳು ಬರುತ್ತಿವೆಯೇ? ನಿಮ್ಮ ಊಹೆಗೇ ಬಿಟ್ಟಿದ್ದು.ಸಹಾಯಧನ ನೀಡುವುದನ್ನು ಸರ್ಕಾರ ಮುಂದುವರಿಸಲಿ. ನಾನೂ ಸಹ ಒಬ್ಬ ಸಬ್ಸಿಡಿ ನಟ.

  ನಿರ್ದೇಶಕ ಭಾರ್ಗವ:
  ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ತೆರಿಗೆ ನೀತಿ ಭಿನ್ನವಾಗಿದೆ. ಈ ತೆರಿಗೆ ನೀತಿಯಿಂದ ನಿರ್ಮಾಪಕ ಬಡವನಾಗುತ್ತಿದ್ದಾನೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

  ಸಾ.ರಾ.ಗೋವಿಂದು:
  ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳ ಗುಣಮಟ್ಟ ಚೆನ್ನಾಗಿದೆ. ನಾವು ನಮ್ಮ ಘನತೆಯನ್ನು ಕಳೆದುಕೊಂಡಿಲ್ಲ. ನಮ್ಮ ಮಾರುಕಟ್ಟೆ ಸೀಮಿತವಾಗಿದ್ದು ಸ್ಪರ್ಧೆ ಕಠಿಣವಾಗಿದೆ. ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಇದಕ್ಕೆ ಸರ್ಕಾರವನ್ನು ಹೊಣೆ ಮಾಡಬಾರದು.

  ಸಿ. ಸೀತಾರಾಂ (ಹಿರಿಯ ಸಿನಿಮಾ ಪತ್ರಕರ್ತ): 1971ರ ಸಂಸ್ಕಾರ ಚಿತ್ರದವರೆಗೂ ಕನ್ನಡ ಚಿತ್ರರಂಗ ಉತ್ತಮವಾಗಿತ್ತು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗ ದುರ್ಬಲವಾಗುತ್ತಾ ಬಂತು. ಎಪ್ಪತ್ತ್ತರ ದಶಕದಲ್ಲಿ ಅಮಿತಾಬ್ ಬಚ್ಚನ್ ಬಿಸಿರಕ್ತದ ಯುವಕನ ಪಾತ್ರಗಳಲ್ಲಿ ನಟಿಸಲು ಆರಂಭಿಸಿದಾಗ ಭಾರತೀಯ ಚಿತ್ರರಂಗವೂ ನಿಂತ ನೀರಾಯಿತು.

  ನಾಗತಿಹಳ್ಳಿ ಚಂದ್ರಶೇಖರ್: ಚಿತ್ರರಂಗಕ್ಕೆ ಅಡಿಯಿಡುವ ಮುನ್ನ ಚಿತ್ರ ನಿರ್ಮಾಪಕರು ತಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳುವ ಸಮಯ ಬಂದಿದೆ. ದುಡ್ಡು ಮಾಡುವ ಏಕೈಕ ಉದ್ದೇಶದಿಂದ ಚಿತ್ರ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅನ್ಯ ಭಾಷೆಯ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು. ವಿಚಾರಸಂಕಿರಣಗಳು, ಉಪನ್ಯಾಸಗಳಿಂದ ಯಾವುದೇ ಪ್ರಯೋಜನವಿಲ್ಲ.

  ಎಚ್ ಜಿ ಸೋಮಶೇಖರ ರಾವ್:
  ನಮ್ಮ ಚಿತ್ರಗಳು ಎರಕದ ಅಚ್ಚನ್ನು ಹೊಂದಿವೆ ಆದರೆ ಆಕಾರ ಇಲ್ಲ. ಮನರಂಜನೆ ಹೆಸರಲ್ಲಿ ನಾವು ಮತ್ತೊಬ್ಬರನ್ನು ಅನುಕರಿಸುತ್ತಿದ್ದೇವೆ.

  ವಿನಯಾಪ್ರಸಾದ್: ನಾವು ನಮ್ಮ ವೃತ್ತಿಯನ್ನು ಗೌರವಿಸುತ್ತಿಲ್ಲ. ಯಾವುದೇ ಒಂದು ಸನ್ನಿವೇಶ ಉತ್ತಮವಾಗಿ ಮೂಡಿಬರಬೇಕು ಎಂದರೆ, ಇಡೀ ತಂಡದ ಮನೋಸ್ಥಿತಿ ಮುಖ್ಯ. ನಮ್ಮನಮ್ಮಲ್ಲೇ ಹೊಂದಾಣಿಕೆ ಇಲ್ಲ ಎಂದರೆ ಉತ್ತಮ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಿಲ್ಲ.ಮಾನವೀಯ ಸಂಬಂಧಗಳು ಮುಖ್ಯ.

  ಜಿ ಕೆ ಗೋವಿಂದರಾವ್:
  ನಮ್ಮ ಸಿನಿಮಾದಲ್ಲಿನ ಸಾಂಸ್ಕೃತಿಕ ಹಿಂಸಾಚಾರ ನಾವು ಇಂದು ನೋಡುತ್ತಿರುವ ರಕ್ತಪಾತಕ್ಕಿಂತಲೂ ಕಠೋರವಾಗಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಕನ್ನಡದ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
  ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
  ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ
  ಅಮೃತ ಮಹೋತ್ಸವ ಪುಸ್ತಕಗಳು ಅನಾವರಣ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X