»   »  ಸ್ವಮೇಕ್ ನಲ್ಲಿ ಸುದೀಪ್, ರೀಮೇಕ್ ನಲ್ಲಿ ವಿಜಯ್

ಸ್ವಮೇಕ್ ನಲ್ಲಿ ಸುದೀಪ್, ರೀಮೇಕ್ ನಲ್ಲಿ ವಿಜಯ್

Subscribe to Filmibeat Kannada
Vijay
ದುನಿಯಾ ವಿಜಯ್ ರ ಹೊಸ ಚಿತ್ರಕ್ಕೆ ಮುಹೂರ್ತ ನಿಗದಿಯಾಗಿದ್ದು ಮಾರ್ಚ್ 6 ರ ಶುಕ್ರವಾರದಂದು ಚಿತ್ರ ಸೆಟ್ಟೇರಲಿದೆ. 'ಜಂಗ್ಲಿ' ಗಳಿಕೆಯಲ್ಲಿ ಉತ್ತಮ ಪ್ರತಿಕ್ರಿಯೆ ತೋರುತ್ತಿರು ಹಿನ್ನೆಲೆಯಲ್ಲಿ ವಿಜಯ್ ಗೆ ಅವಕಾಶಗಳು ಬೆನ್ನೇರುತ್ತಿವೆ.

ವಿಜಯ್ ಅಭಿನಯದ 'ಯುಗ' ಚಿತ್ರ ನಿರ್ದೇಶಿಸಿದ್ದ ಚಂದ್ರು ಈ ಹೊಸ ಚಿತ್ರದ ನಿರ್ದೇಶಕರು. ಶಂಕರೇಗೌಡ ನಿರ್ಮಿಸುತ್ತಿರುವ ಚಿತ್ರಕ್ಕೆ 'ಯುಗ' ಸಮಯದಲ್ಲೇ ಡೇಟ್ಸ್ ಪಡೆದಿದ್ದರಂತೆ. ಹಾಗಾಗಿ ಆ ಹಳೆಯ ಕಮಿಟ್ ಮೆಂಟ್ ಈಗ ಚಿಗುರೊಡೆದಿದೆ. ಅಂದಹಾಗೆ ಇದೂ ರೀಮೇಕ್ ಚಿತ್ರವಂತೆ. ಚಿತ್ರದ ಕುಲ ಗೋತ್ರ, ರಾಶಿ ನಕ್ಷತ್ರಗಳು ಇನ್ನೂ ಗೊತ್ತಿಲ್ಲ. ಮಾರ್ಚ್ 6ನೇ ತಾರೀಖಿನೊಳಗೆ ಎಲ್ಲವೂ ತಿಳಿಯಲಿವೆ.

ಸುದೀಪ್ ನಾಯಕ ನಟನಾಗಿ ಶಂಕರೇಗೌಡ ಮತ್ತೊಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುದೀಪ್ ಅವರೇ ನಿರ್ದೇಶಿಸುವ ಈ ಚಿತ್ರ ಪಕ್ಕಾ ಸ್ವಮೇಕ್ ಚಿತ್ರವಂತೆ. ವಿಜಯ್ ಮತ್ತು ಸುದೀಪ್ ರ ಎರಡು ಚಿತ್ರಗಳು ಒಟ್ಟಿಗೇ ಸೆಟ್ಟೇರಬೇಕಾಗಿತ್ತು. ಕಾರಣಾಂತರಗಳಿಂದ ಸುದೀಪ್ ಚಿತ್ರ ಮುಂದಕ್ಕೆ ಹೋಗಿದೆ. ಮಾರ್ಚ್ 13ಅಥವಾ 15 ರಂದು ಸೆಟ್ಟೇರುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್
ದುಗ್ಗಾಣಿ ಖರ್ಚಿಲ್ಲದೆ ಬಂದ ಜಂಗ್ಲಿ ಧ್ವನಿಸುರುಳಿ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada