For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದ ಮೂರು ಕನ್ನಡ ಚಿತ್ರಗಳು ಅದೃಷ್ಟ ಪರೀಕ್ಷೆಗೆ

  By Srinath
  |

  ಮೂರು ಬಿಗ್ ಬಜೆಟ್ ಚಿತ್ರಗಳು ಇಂದಿನಿಂದ (ಜೂ 3) ಬಿಡುಗಡೆಗೊಳ್ಳಲಿದೆ. ಮೂರೂ ಚಿತ್ರಗಳಿಗೆ ಹೈಪ್ ಸೃಷ್ಟಿಯಾಗಿದ್ದು ತ್ರಿಕೋಣ ಸ್ಪರ್ಧೆಯಲ್ಲಿ ಯಾರು ಮಂಚೂಣಿಯಲ್ಲಿ ಇರುತ್ತಾರೆನ್ನುವುದು ಅಭಿಮಾನಿ ದೇವರುಗಳು ನಿರ್ಧರಿಸುತ್ತಾರೆ.

  ಈ ನಡುವೆ ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳಿಂದಲೇ ಗಳಿಕೆಗೆ ತೊಂದರೆಯಾಗುತ್ತಿದೆ ಎಂದು ಮಲ್ಲಿಕಾರ್ಜುನ ಚಿತ್ರದ ನಿರ್ದೇಶಕ ದಿನೇಶ್ ಗಾಂಧೀ ಚಲನಚಿತ್ರ ಮಂಡಳಿಯ ಎದುರು ಪ್ರತಿಭಟನೆ ನಡೆಸಿದ್ದೂ ಆಗಿದೆ. ಆದರೆ ಈ ಚಿತ್ರ ನೋಡಲು ಪ್ರೇಕ್ಷಕರು ಯಾವ 'ಕ್ರೇಜಿ' ಕೂಡಾ ತೋರಿಸಲಿಲ್ಲ ಎನ್ನವುದು ಬೇರೆ ವಿಚಾರ.

  1. ರಾಜಧಾನಿ : ಯಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ರಾಜಧಾನಿ ಜನತೆಯ ಬದುಕು ಬವಣೆಗಳ ಕುರಿತಾದದ್ದು. ಹಿರಿಯ ನಿರ್ದೇಶಕ ಕೆ ವಿ ರಾಜು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಅರ್ಜುನ್ ಸಂಗೀತ ನೀಡಿದ್ದಾರೆ. ಸೌಮ್ಯಾ ಸತ್ಯನ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಕಾಶ್ ರೈ ಕೂಡ ನಟಿಸುತ್ತಿದ್ದಾರೆ. ಶೀನ ಸಹಬಾದಿ ಚಿತ್ರದ ನಾಯಕಿ. ಅರುಣ್ ಸಾಗರ್, ರಮೇಶ್ ಭಟ್, ರಾಜು ತಾಳಿಕೋಟೆ, ಉಮಾಶ್ರೀ, ಬಿರಾದರ್ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಯಶ್ ಡ್ಯೂಪ್ ಇಲ್ಲದೆ ಅದ್ಭುತ ಸ್ಟಂಟ್ ನಡೆಸಿದ್ದಾರೆನ್ನುವುದು ಈಗಾಗಲೇ ನಿಮಗೆ ತಿಳಿದಿದೆ.

  2 . ದುಷ್ಟ: ಇದು ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಕನಸಿನ ಕೂಸು. ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲದ ಚೈತ್ರದ ಚಂದಮ, ಚೆಲುವಿನ ಚಿಲಿಪಿಲಿ ಚಿತ್ರದ ನಂತರ ಪಂಕಜ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಭದ್ರಾವತಿಯಲ್ಲಿರುವ ಎಸ್ ನಾರಾಯಣ್ ಸ್ನೇಹಿತನ ಕುಟುಂಬದಲ್ಲಿ 30 ವರ್ಷಗಳ ಹಿಂದೆ ನಡೆದ ನೈಜ ಕಥಾದಾರಿತ. ಈಶ ಮತ್ತು ಪಾರ್ವತಿ ಎನ್ನುವ ಪ್ರೇಮಿಗಳ ನಡುವಿನ ಕಥೆಯೇ ಚಿತ್ರದ ಚಿತ್ರಕಥೆ. ಸುರಭಿ ಎನ್ನುವ ಹುಡುಗಿ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಮತ್ತು ನಿರ್ಮಾಪಕ ನಾರಾಯಣ್ ಅವರೇ.

  3. ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್: ದುನಿಯಾ ವಿಜಯ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತೆ ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದಾರೆ. ಮಾಸ್ ಹೀರೋ ವಿಜಯ್ ಮತ್ತು ಕ್ಲಾಸ್ ಡಾರ್ಲಿಂಗ್ ರಮ್ಯಾ ಕಾಂಬಿನೇಶನ್ ತೆರೆ ಮೇಲೆ ಯಾವ ರೀತಿ ವರ್ಕ್ಔಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕು. ಊರಿಗೊಬ್ಬಳೇ ಪದ್ಮಾವತಿ ಎನ್ನೋ ಮೂಲಕ ರಮ್ಯಾ ಐಟಂ ಸಾಂಗ್ ನಲ್ಲಿ ನಟಿಸಿ ಪಡ್ಡೆಗಳಿಗೆ ಬಿಸಿ ಮುಟ್ಟಿಸಿದ್ದಂತೂ ನಿಜ. ವಿಜಯ್ ಚಿತ್ರದಲ್ಲಿ ಎಂದಿನಂತೆ ರಂಗಾಯಣ ರಘು ನಟಿಸುತ್ತಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದ ಗೆಲುವಿನ ಗುಂಗಿನಲ್ಲಿರುವ ರಮ್ಯಾಗೆ ಮತ್ತು ಸೋತು ಹೈರಾಣವಾಗಿರುವ ವಿಜಯ್ ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರು ಏನೇ ಆಗಲಿ "ನೋಡೋದು ಮೇರಾ ಕಾಮ್" ಅಂದರೆ ಚಿತ್ರತಂಡ ಬಚಾವ್.

  ಈ ಮೂರೂ ಚಿತ್ರಗಳು ಮೂವರು ಹೀರೋ ಆಗಿ ನಟಿಸಿರುವ ಕಲೆಕ್ಷನ್ ನಲ್ಲಿ ಭರ್ಜರಿ ಮುನ್ನಡೆಯಲ್ಲಿರುವ ಹುಡುಗರು ಚಿತ್ರಕ್ಕೆ ಯಾವ ರೀತಿ ಪೈಪೋಟಿ ನೀಡುತ್ತೆ ಅನ್ನೋದನ್ನಾ ಕಾದು ನೋಡೋಣ. ಇನ್ನು ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್ ಚಿತ್ರದ ವಿಮರ್ಶೆ ಬಗ್ಗೆ ನಮ್ಮ ಚಿತ್ರತಂಡದ ಸಹದ್ಯೋಗಿ ಯಾವ ರೀತಿ ಹೇಳುತ್ತಾರೋ ನೋಡಲು "ಕೀಪ್ ಕ್ಲಿಕ್ಕಿಂಗ್ ದಟ್ಸ್ ಕನ್ನಡ".

  English summary
  Sandalwood is set to witness 3 movies release today (June 3) all over karnataka. The films are johny mera naam preethi mera kaam, rajadhani and dushta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X