»   »  ವಿಜಯ್ ರಾಘವೇಂದ್ರನಿಗೆ ಡಬಲ್ ಖುಷಿ

ವಿಜಯ್ ರಾಘವೇಂದ್ರನಿಗೆ ಡಬಲ್ ಖುಷಿ

Subscribe to Filmibeat Kannada
Vijay Raghavendra becomes father
ಹೊಸ ವರ್ಷ ವಿಜಯ ರಾಘವೇಂದ್ರ ಅವರಿಗೆ ಡಬಲ್ ಖುಷಿ ಕೊಟ್ಟಿದೆ. ಅವರ ನಟನೆಯ 'ಕಾರಂಜಿ' ಚಿತ್ರ ಇನ್ನೇನು ತೆರೆ ಕಾಣಲಿದೆ. ಚಿತ್ರದ ಧ್ವನಿಸುರುಳಿಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ಖುಷಿಗಳ ನಡುವೆಯೇ ಅವರು ತಂದೆಯಾಗಿದ್ದಾರೆ.

ಡಿಸೆಂಬರ್ 31ರ ರಾತ್ರಿ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವಿಜಯ ರಾಘವೇಂದ್ರ ತಿಳಿಸಿದ್ದಾರೆ.

ನಟ ದರ್ಶನ್, ನಿರ್ದೇಶಕ ಪ್ರೇಮ್ ಇದೀಗ ವಿಜಯ ರಾಘವೇಂದ್ರ ಅವರು ಪುತ್ರೋತ್ಸಾಹದಲ್ಲಿದ್ದಾರೆ. ಇವರೆಲ್ಲರಿಗೂ ಪುತ್ರ ಸಂತಾನ ಭಾಗ್ಯ ಲಭಿಸಿದೆ! ಒಟ್ಟಿನಲ್ಲಿ ಕನ್ನಡ ಚಿತ್ರರಂಗ ವಾರಸ್ದಾರರ ಸಂಭ್ರಮದಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!

Please Wait while comments are loading...