»   »  ಆ.7ಕ್ಕೆ ಟೆನ್ತ್ ಕ್ಲಾಸ್ ಎ ಸೆಕ್ಷನ್ ಫಲಿತಾಂಶ!

ಆ.7ಕ್ಕೆ ಟೆನ್ತ್ ಕ್ಲಾಸ್ ಎ ಸೆಕ್ಷನ್ ಫಲಿತಾಂಶ!

Posted By:
Subscribe to Filmibeat Kannada

ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವು ಎಸ್ಸೆಸ್ಸೆಲ್ಸಿ ಪರೀಕ್ಷೆ. ಆಗಸ್ಟ್ 7ರಂದು '10th Class A' ಸೆಕ್ಷನ್ನಿನ ಮೌಲ್ಯಮಾಪನ ಕಾರ್ಯಆರಂಭವಾಗಲಿದೆ! ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದರೂ 10th Class A ಸೆಕ್ಷನ್ನಿನ ಫಲಿತಾಂಶಗಳು ಮಾತ್ರ ಬಾಕಿ ಉಳಿದಿತ್ತು. ಯಾವುದಕ್ಕೂ ಕಾಲ ಕೂಡಿಬರಬೇಕು ಎನ್ನುವುದು ಇದಕ್ಕೆ. ಇದೀಗ ಆಗಸ್ಟ್ 7ಕ್ಕೆ ಮುಹೂರ್ತ ಫಿಕ್ಸ್ ಆಗಿದೆ!

ಅಚ್ಚರಿ ಪಡುವಂತಹದ್ದು ಏನೂ ಇಲ್ಲ, 10th Class A ಎಂಬುದು ಚಿತ್ರದ ಹೆಸರು. ಈ ಚಿತ್ರ ಆಗಸ್ಟ್ 7ರಂದು ಬಿಡುಗಡೆಯಾಗುತ್ತಿದೆ. ಮೌಲ್ಯಮಾಪನ ಮಾಡುವವರು ಪ್ರೇಕ್ಷಕರು. ಫಲಿತಾಂಶವನ್ನು ಕಾತುರದಿಂದ ನಿರೀಕ್ಷಿಸುತ್ತಿರುವವರು ನಿರ್ಮಾಪಕರಾದ ಪ್ರಕಾಶ್, ರಾಖಿ ಮತ್ತು ರಾಧಾ ಪ್ರಕಾಶ್. ಚಿತ್ರ ಫಸ್ಟ್ ಕ್ಲಾಸಲ್ಲಿ ಪಾಸಾಗುತ್ತದೆ ಎಂಬ ವಿಶ್ವಾಸ ಅವರದು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಟಿಕೆಟ್ ಗಳನ್ನು ನೀಡಲಾಗುತ್ತದೆ ಎಂದು ನಿರ್ಮಾಪಕ ಪ್ರಕಾಶ್ ಪ್ರಕಟಿಸಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಲಾಭವನ್ನು ಪಡೆಯಬೇಕೆಂಬುದು ಅವರ ವಿನಂತಿ.

ಪ್ರೀತಿ, ಪ್ರೇಮ ಎಂದು ಓದನ್ನು ಕಡೆಗಣಿಸಬೇಡಿ. ಪೋಷಕರ ಹಿತನುಡಿಗಳಿಗೆ ಬೆಲೆ ಕೊಡಿ ಎಂಬ ಸಂದೇಶವನ್ನು ಚಿತ್ರ ಹೊಂದಿದೆಯಂತೆ. ಪೃಥ್ವಿ, ನವೀನ್, ಪ್ರಿಯಾಂಕ ಚಂದ್ರನ್ ಇವರೆಲ್ಲಾ 10th Class A ಸೆಕ್ಷನ್ನಿನ ವಿದ್ಯಾರ್ಥಿಗಳು. ಚಿತ್ರದಲ್ಲಿನ ನಟನೆ ನಮಗೆಲ್ಲಾ ವಿಭಿನ್ನ ಅನುಭವ ಕೊಟ್ಟಿದೆ ಎನ್ನುತ್ತಾರೆ ಇವರೆಲ್ಲಾ. (ಇದೀಗ ತಾನೆ ಬಂದಂತಹ ಮಾಹಿತಿ ಪ್ರಕಾರ 10th class A ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ).

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada