»   » ನಟಿ ಪ್ರಿಯಾ ಹಾಸನ್ ಕುಟುಂಬದ ಮೇಲೆ ದೂರು

ನಟಿ ಪ್ರಿಯಾ ಹಾಸನ್ ಕುಟುಂಬದ ಮೇಲೆ ದೂರು

Posted By:
Subscribe to Filmibeat Kannada

ಚಿತ್ರನಟಿ ಪ್ರಿಯಾ ಹಾಸನ್ ಹಾಗೂ ಅವರ ಕುಟುಂಬ ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಮಂಜುಳಾ ಗೌಡ ಎಂಬುವವರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ(ಮೇ.4) ದೂರು ನೀಡಿದ್ದಾರೆ. ಈ ಸಂಬಂಧ ಪ್ರಿಯಾ ಹಾಸನ್ ಸಹೋದರ ಮೋಹನ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಾ ಹಾಸನ್ ಅವರ ಸಹೋದರ ಮೋಹನ್ ಗೌಡ ತಮ್ಮನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾನೆಂದು ಮಂಜುಳಾ ಗೌಡ ಆರೋಪಿಸಿದ್ದಾರೆ. ಈ ವಿಚಾರವಾಗಿ ಇಂದು ಪ್ರಿಯಾ ಹಾಸನ್ ಮನೆಗೆ ತೆರಳಿ ವಿಷಯ ತಿಳಿಸಲು ಮುಂದಾದಾಗ ಪ್ರಿಯಾಹಾಸನ್ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಿಯಾ ಹಾಸನ್ ಅವರ ಕಾರು ಚಾಲಕ ಶೇಖರ್, ಪ್ರಿಯಾ ಹಾಸನ್ ಹಾಗೂ ಆಕೆಯ ತಾಯಿ ತನ್ನ ಮೇಲೆ ಹಲ್ಲೆ ನಡೆಸಿದರೆಂದು ಮಂಜುಳಾ ಗೌಡ ದೂರಿದ್ದಾರೆ. ಬಸವೇಶ್ವರ ನಗರ ನಿವಾಸಿಯಾದ ಮಂಜುಳಾ ಗೌಡ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಚಿತ್ರನಟಿ ಪ್ರಿಯಾ ಹಾಸನ್ ಸಹೋದರ ಮೋಹನ್ ಗೌಡ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮಂಜುಳಾ ಗೌಡ ಅವರಿಗೆ ಈಗಾಗಲೆ ಮದುವೆಯಾಗಿದ್ದು ಮಗು ಸಹ ಇದೆ. ವಿಧವೆಯಾಗಿರುವ ಈಕೆಯನ್ನು ಮದುವೆಯಾಗುವುದಾಗಿ ಮೋಹನ್ ಗೌಡ ನಂಬಿಸಿದ್ದ. ಇಬರಿಬ್ಬರೂ ಕೆಲದಿನ ಒಟ್ಟಿಗೆ ಇದ್ದರು ಎನ್ನಲಾಗಿದೆ. ಇಬ್ಬರೂ ಪಶುವೈದ್ಯಕೀಯ ಶಿಕ್ಷಣ ಪಡೆದಿದ್ದು ಪೆಟ್ ಕ್ಲಿನಿಕನ್ನು ಒಟ್ಟಿಗೆ ಆರಂಭಿಸಿ ವ್ಯವಹಾರ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada