For Quick Alerts
  ALLOW NOTIFICATIONS  
  For Daily Alerts

  ಗಣೇಶನಾಟದಲ್ಲಿ ಉಲ್ಲಾಸ-ಉತ್ಸಾಹ

  By Staff
  |
  ಹದಿಹರಯದ ವಯಸ್ಸಿನಲ್ಲಿ ತುಂಟಾಟವಾಡುವುದು ಸಹಜ. ಹುಡುಗಾಟದ ಹುಡುಗ ಗಣೇಶ್ ಕೂಡ ಯಾವ ತುಂಟರಿಗೂ ಕಡಿಮೆ ಇಲ್ಲ. ಅಪ್ಪ ರಂಗಾಯಣರಘು ಗ್ಯಾರೆಜ್‌ನ ಮಾಲೀಕ. ಹಲವು ದುಬಾರಿ ಬೆಲೆಯ ಕಾರುಗಳು ದುರಸ್ತಿಗೆ ಬರುವ ಸ್ಥಳವದು. ಹೀಗೆ ಐವತ್ತು ಲಕ್ಷ ಬೆಲೆಯ ಕಾರೊಂದು ದುರಸ್ತಿಗೆ ಬರುತ್ತದೆ. ಅಪ್ಪ ಇಲ್ಲದ ಸಮಯವನ್ನು ಹೊಂಚು ಹಾಕುತ್ತಿದ ಗಣೇಶ್ ತನ್ನ ಸಹಪಾಠಿಗಳೊಂದಿಗೆ ದುಬಾರಿ ಕಾರಿನಲ್ಲಿ ಸುತ್ತಾಟಕ್ಕೆ ಹೊರಡುತ್ತಾನೆ. ಆಕಸ್ಮಿಕವಾಗಿ ಕಾರು ಅಪಘಾತಕ್ಕೀಡಾಗುತ್ತದೆ ಕಾರು ಮಾಲೀಕನ ಎದುರಿನಲ್ಲೇ.

  ಈ ದೃಶ್ಯ ಕಂಡು ಕೆಂಡಾಮಂಡಲನಾದ ಕಾರಿನ ಯಜಮಾನ ರಂಗಾಯಣರಘು ಮೇಲೆ ಹೌಹಾರುತ್ತಾನೆ. ಕೋಪದಿಂದಲ್ಲೇ ಮನೆಗೆ ಬಂದ ತಂದೆ ಮಗನ ಮೇಲೆ ಉಗ್ರನಾಗುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಆಗಮಿಸಿದ ತಾಯಿ ತುಳಸಿಶಿವಮಣಿ ಹಾಗೂ ಅತ್ತಿಗೆ ಪ್ರೀತಿಚಂದ್ರಶೇಖರ್ ಗಣೇಶನ ಕಡೆ ವಕಾಲತ್ತು ವಹಿಸುವ ಹಾಸ್ಯಭರಿತ ಕೌಟುಂಬಿಕ ಸನ್ನಿವೇಶವನ್ನು ಮೈಸೂರಿನ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಿಸಿಕೊಳ್ಳುವುದರೊಂದಿಗೆ 'ಉಲ್ಲಾಸ ಉತ್ಸಾಹ' ಚಿತ್ರಕ್ಕೆ ಮೊದಲಹಂತದ ಚಿತ್ರೀಕರಣವನ್ನು ಮುಕ್ತಾಯಗೊಳ್ಳಿಸಿದ್ದಾರೆ ನಿರ್ದೇಶಕ ದೇವರಾಜ್‌ಪಾಲನ್.

  ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಮುತ್ತಿನ ನಗರ ಹೈದರಾಬಾದ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಹಲವು ವರ್ಷಗಳ ಕಾಲ ಖ್ಯಾತ ನಿರ್ದೇಶಕರ ಬಳಿ ಸಹಾಯಕರಾಗಿದ್ದ ದೇವರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತೆಲುಗಿನಲ್ಲಿ ಪ್ರಚಂಡ ಯಶಸ್ಸು ಕಂಡ 'ಉಲ್ಲಾಸಂಗ ಉತ್ಸಾಹಂಗ' ಚಿತ್ರದಲ್ಲಿ ಕನ್ನಡಿಗ ಯಶೋಸಾಗರ್ ನಾಯಕನಾಗಿ ಅಭಿನಯಿಸಿದ್ದರು. ಆ ಯಶಸ್ವಿ ಚಿತ್ರವನ್ನು ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಎಂಬ ಹೆಸರಿನಿಂದ ನಿರ್ಮಿಸುತ್ತಿದ್ದಾರೆ ಬಿ.ಪಿ.ತ್ಯಾಗರಾಜ್. ಹಾಸ್ಯ ಪ್ರಧಾನವಾಗಿರುವ ಈ ಚಿತ್ರವನ್ನು ಕನ್ನಡಿಗರು ತುಂಬು ಹೃದಯದಿಂದ ಸ್ವೀಕರಿಸಿ ಹಾರೈಸುತ್ತಾರೆ ಎಂಬ ನಂಬಿಕೆ ನಿರ್ಮಾಪಕರಿಗಿದೆ.

  ಕಾಂತಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕರುಣಾಕರನ್ ಕತೆ ಬರೆದಿದ್ದಾರೆ. ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣನಿರ್ವಹಣೆಯಿದೆ. ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರನ್ನು ಒಳಗೊಂಡ ಚಿತ್ರದದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು ಮುಖ್ಯ ಪಾತ್ರಧಾರಿಗಳು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
  ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X