Just In
Don't Miss!
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಈ ಬಾರಿಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತಿದೆ. ವಿಶೇಷವೆಂದರೆ ಇದೇ ಪ್ರಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ವಾರ್ತಾ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾಯದರ್ಶಿಗಳಾದ ರಮೇಶ್ ಬಿ.ಝಳಕಿಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅವರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಾಟು ಕುರಿತಂತೆ ಕರ್ನಾಟಕ ಫಿಲಂ ಛೇಂಬರ್, ಚಲನ ಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ ಮತ್ತಿತರ ಚಲನ ಚಿತ್ರ ಕ್ಷೇತ್ರದ ಪ್ರಮುಖರೊಡನೆ ಪೂರ್ವಭಾವಿ ಸಭೆಯ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಈ ಉತ್ಸವದ ಆಯೋಜನೆಗಾಗಿ ವಿವಿಧ ಸಮಿತಿ, ಉಪಸಮಿತಿಗಳನ್ನು ರಚಿಸಲಾಗುವುದು. ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ.ಮುದ್ದುಮೋಹನ್ ರವರು ಕಾರ್ಯಕಾರಿ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುತ್ತಾರೆ. ಉತ್ಸವ ನಿರ್ವಹಣೆಯ ಕಲಾನಿರ್ದೇಶಕರಾಗಿ ನರಹರಿಯವರನ್ನು, ಫೆಸ್ಟಿವಲ್ ಡೈರೆಕ್ಟರ್ ಆಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಉತ್ಸವದ ಸಲಹೆಗಾರರಾಗಿ ನಿರ್ಮಾಪಕ, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರನ್ನು ನೇಮಿಸಲು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ ಎಂದು ಅವರು ತಿಳಿಸಿದರು.
ಉತ್ಸವದ ವ್ಯವಸ್ಥೆಗಾಗಿ ರಚಿಸುವ ಕೋರ್ ಕಮಿಟಿಯಲ್ಲಿ ಈ 5 ಜನರ ಜೊತೆಗೆ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಮಾಧ್ಯಮ ಅಕಾಡೆಮಿ ಅಧ್ಯಕ್ಷರು, ಚಲನ ಚಿತ್ರ ಅಕಾಡೆಮಿ ಅಧ್ಯಕ್ಷರು, ಹಿರಿಯ ಚಲನ ಚಿತ್ರ ನಟಿ ಜಯಂತಿಯವರು, ಪತ್ರಕರ್ತೆ ಸಾವಿತ್ರಿಯವರು ಸದಸ್ಯರಾಗಿರುತ್ತಾರೆ. ಮುಂದಿನ ಒಂದು ವಾರದಲ್ಲಿ ಅಂತಾರಾಷ್ಟ್ರೀಯ ಉತ್ಸವದ ಲೊಗೋ, ಥೀಮ್, ಮತ್ತು ಸಾಂಗ್, ಕುರಿತಂತೆ ಕೋರ್ ಕಮಿಟಿ ತೀರ್ಮಾನಿಸುತ್ತದೆ.
ಸುಮಾರು 8 ಉಪಸಮಿತಿಗಳನ್ನು ರಚಿಸಲು ಸಲಹೆ ಬಂದಿದೆ, ಒಂದು ಸ್ಥೂಲ ರೂಪುರೇಷೆ ಮಾತ್ರ ಇಂದು ರೂಪುಗೊಂಡಿದ್ದು ,ಮುಂದಿನ ಒಂದು ವಾರದಲ್ಲಿ ಅವುಗಳಿಗೆ ಒಂದು ಸ್ಪಷ್ಟ ರೂಪದೊರೆಯುತ್ತದೆ, ಈ ಉತ್ಸವದ ಯಶಸ್ಸಿಗೆ ಕನ್ನಡ ಚಲನ ಚಿತ್ರ ಕ್ಷೇತ್ರದ ನಿರ್ಮಾಪಕರುಗಳು, ವಿತರಕರು, ಪ್ರದರ್ಶಕರು ಒಳಗೊಂಡಂತೆ ಎಲ್ಲರ ಸಹಕಾರ ಅಗತ್ಯವಿದೆಯೆಂದರು.
ಮುಖ್ಯಮಂತ್ರಿಗಳು ಈ ಉತ್ಸವಕ್ಕಾಗಿ 5 ಕೋಟಿ ರೂಗಳನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆಂದು ತಿಳಿಸಿದ ಝಳಕಿಯವರು ಈಗಾಗಲೆ ರು. 1.5 ಕೋಟಿ ಬಿಡುಗಡೆ ಮಾಡಲಾಗಿದೆ, ಸಮಿತಿಗಳ ರಚನೆಯ ನಂತರ ಉತ್ಸವ ವ್ಯವಸ್ಥೆಗೆ ಎಷ್ಟು ಅಗತ್ಯವೆಂಬ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ರಮೇಶ್ ಝಳಕಿಯವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆಯ ನಿರ್ದೇಕರಾದ ಡಾ.ಮುದ್ದು ಮೋಹನ್, ಚಲನ ಚಿತ್ರ ಅಕಾಡೆಮಿ ಅದ್ಯಕ್ಷರಾದ ಟಿ.ಎಸ್.ನಾಗಾಭರಣ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್, ಫಿಲಂ ಚೇಂಬರ್ ಅಧ್ಯಕ್ಷರಾದ ಬಸಂತ್ ಕುಮಾರ್ ಪಾಟೀಲ್, ನರಹರಿ, ಚಲನಚಿತ್ರ ತಾರೆ ಜಯಂತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.