ಕುಲು ಮನಾಲಿಯಲ್ಲಿ ‘ಮನಸಿನ ಮಾತು

ಪ್ರಸ್ತುತ 'ಮನಸಿನ ಮಾತು' ಚಿತ್ರಕ್ಕಾಗಿ ನಿರ್ದೇಶಕ ಅನಂತರಾಜು ರಚಿಸಿರುವ 'ಬಂದೆ ಏಕೆ ನೀ ನನ್ನ ಬಾಳಲಿ- ನಿಂದೆ ಏಕೆ ಈ ನನ್ನ ಮನದಲಿ ಮತ್ತು 'ಹೇಳಲು ಬಂದೆ ಪ್ರೀತಿಯೇ ಹೃದಯದೊಳಗಡೆ ಕಚಗುಳಿ ಇಡುತಾ ಎಂಬ ಎರಡು ಹಾಡುಗಳು ಈ ಪ್ರೇಕ್ಷಣೀಯ ಸ್ಥಳದಲ್ಲಿ ಚಿತ್ರೀಕರಣಗೊಂಡಿದೆ. ನಾಯಕ ಅಜಯ್ ಹಾಗೂ ಚೆಲುವೆ ಅಂದ್ರಿತಾ ರೇ ರಘು ನೃತ್ಯ ಸಂಯೋಜಿಸಿದ ಈ ಗೀತೆಗಳಿಗೆ ಹೆಜ್ಜೆ ಹಾಕಿದರು. ಇನ್ನೊಂದು ಹಾಡಿನ ಚಿತ್ರೀಕರಣ ಪೂರ್ಣವಾದರೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಅನಂತರಾಜು ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿ.ರಾಜಶೇಖರ್ ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಅವರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ರಾಂನಾರಾಯಣ್ ಸಂಭಾಷಣೆ, ಅನಿಲ್.ಬಿ.ಕೃಷ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಅಜಯ್, ಅಂದ್ರಿತಾ ರೇ, ಅವಿನಾಶ್, ಸಾಧುಕೋಕಿಲಾ, ತಾರಾ, ಲೋಹಿತ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಮನಸಿನ ಮಾತಿನಲ್ಲಿ ಮುಳುಗಿದ ಅಂದ್ರಿತಾ ರೇ
'ಏಂಜಲ್ಸ್ ಅಂಡ್ ಡೆಮನ್ಸ್ ' ಚಿತ್ರಕ್ಕೆ ಕ್ರೈಸ್ತರ ವಿರೋಧ
ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!


Click it and Unblock the Notifications











