»   » ಈ ವಾರ ತೆರೆಗೆ 'ನನ್ನ ಒಲವಿನ ಬಣ್ಣ'

ಈ ವಾರ ತೆರೆಗೆ 'ನನ್ನ ಒಲವಿನ ಬಣ್ಣ'

Posted By:
Subscribe to Filmibeat Kannada

ಪ್ರಚಾರಕಲೆಯಲ್ಲಿ ಖ್ಯಾತರಾಗಿರುವ ಭೂಷಣ್‌ಗೀಚಿ ನಿರ್ದೆಶನದ 'ನನ್ನ ಒಲವಿನ ಬಣ್ಣ' ಚಿತ್ರ ಈ ವಾರ(ಮಾ.5) ಬಿಡುಗಡೆಯಾಗುತ್ತಿದೆ.ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಅವರು ಪ್ರೀತಿಯನ್ನು ಬಣ್ಣದ ಮೂಲಕ ತೋರಲಿದ್ದಾರೆ.

ವಿಭಿನ್ನ ಕಥೆಯುಳ್ಳ ಈ ಚಿತ್ರದಲ್ಲಿ ಸೋಮಶೇಖರ್ ನಾಯಕನಾಗಿ ನಟಿಸಿದ್ದಾರೆ. ಇವರೇ ಚಿತ್ರದ ನಿರ್ಮಾಪಕರು ಕೂಡ.ತಿಬ್ಬಾದೇವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ನನ್ನ ಒಲವಿನ ಬಣ್ಣ' ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ.

ವಿ.ನಾಗೇಶ್ ಛಾಯಾಗ್ರಹಣ, ಶಿವರಾಜ್ ಸಂಕಲನ, ಲಕ್ಷ್ಮಣ್, ತ್ರಿಭುವನ್ ನೃತ್ಯ, ಅಶೋಕ್ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ಸೋಮಶೇಖರ್, ಶಾಂತಲಾ, ಅಶ್ವಿನಿ, ಸುಬ್ಬೇಗೌಡ, ಬಿರಾದರ್, ದೀಪು, ಹನುಮಕ್ಕ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada