For Quick Alerts
  ALLOW NOTIFICATIONS  
  For Daily Alerts

  ತೆಲುಗು ಭಾಷೆಗೆ ಪುನೀತ್ ರಾಜ್ ಕುಮಾರ್ 'ಜಾಕಿ' ಡಬ್

  By Rajendra
  |

  ಕನ್ನಡ ಚಿತ್ರಗಳು ಪರಭಾಷೆಗೆ ಡಬ್‌ ಆಗುವುದು ತೀರಾ ಅಪರೂಪದ ಸಂಗತಿ. ಈ ಅಪರೂಪದ ಬೆಳವಣಿಗೆ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರದ ಮುಖಾಂತರ ಆಗಿದೆ. ವಿಷಯ ಏನೆಂದರೆ ದುನಿಯಾ ಸೂರಿ ನಿರ್ದೇಶನದ ಜಾಕಿ ಚಿತ್ರ ತೆಲುಗು ಭಾಷೆಗೆ ಡಬ್ ಆಗುತ್ತಿದೆ. ಇತ್ತೀಚೆಗೆ ಜಾಕಿ ತೆಲುಗುಧ್ವನಿಸುರುಳಿ ಹೈದರಾಬಾದ್‌ನಲ್ಲಿ ಬಿಡುಗಡೆಯಾಯಿತು. ತೆಲುಗು ಚಿತ್ರರಂಗದ ಬಹುತೇಕ ಕಲಾವಿದರು ಸೇರಿದಂತೆ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪುನೀತ್ ಕೂಡ ಉಪಸ್ಥಿತರಿದ್ದರು.

  ಹೈದರಾಬಾದ್‌ನ ದಾಸ್‌ಪಲ್ಲ ಹೋಟೆಲ್‌ನಲ್ಲಿ ಆಡಿಯೋ ಬಿಡುಗಡೆ ಸಮಾರಂಭ ವರ್ಣರಂಜಿತವಾಗಿ ನಡೆಯಿತು (ಗ್ಯಾಲರಿ ನೋಡಿ).ತೆಲುಗಿನ ಹಿರಿಯ ನಟ ಸತ್ಯನಾರಾಯಣ ಹಾಗೂ ಕೆ ಎಸ್ ರಾಮಾರಾವ್(ವೀರ ಕನ್ನಡಿಗ ಚಿತ್ರವನ್ನು ನಿರ್ಮಿಸಿದ್ದರು) ಸೇರಿದಂತೆ ನಿರ್ದೇಶಕ ವೀರ ಶಂಕರ್ ಮತ್ತು ಮೆಹರ್ ರಮೇಶ್ (ನಮ್ಮ ಬಸವ, ವೀರ ಕನ್ನಡಿಗ ನಿರ್ದೇಶಕ) ಸಮಾರಂಭದಲ್ಲಿ ಭಾಗವಹಿಸಿದ್ದರು.

  ಇತ್ತೀಚೆಗೆ ಡಾ.ರಾಜ್ ಕುಟುಂಬವನ್ನು ತಮ್ಮ ಮದುವೆಗೆ ಆಹ್ವಾನಿಸಲು ಬೆಂಗಳೂರಿಗೆ ಬಂದಿದ್ದ ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಕೂಡ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭಕೋರಿದರು. ವರನಟ ಡಾ.ರಾಜ್ ಕುಮಾರ್ ಅವರಿಗೆ ಆಪ್ತಮಿತ್ರರಾಗಿದ್ದ ತೆಲುಗಿನ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವ್ ಅವರಿಗೆ ಚಿತ್ರದ ಮೊದಲ ಸೀಡಿಯನ್ನು ಹಸ್ತಾಂತರಿಸುವ ಮೂಲಕ 'ಜಾಕಿ' ತೆಲುಗು ಆಡಿಯೋ ಆಂಧ್ರದಲ್ಲಿ ಬಿಡುಗಡೆಯಾಗಿದೆ.

  English summary
  Puneet Rajkumar Jackie, which has become blockbuster film in Kannada, is now being dubbed in Telugu. The audio CD of the Telugu version was released at a function held in Hotel Das Palla, Hyderabad. Telugu star Allu Arjun unveiled the first audio CD.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X