»   » ಮೋಹನ್ ಲಾಲ್ ಜೊತೆ 'ಗಂಡೆದೆ' ನಾಯಕಿ ರಾಗಿಣಿ

ಮೋಹನ್ ಲಾಲ್ ಜೊತೆ 'ಗಂಡೆದೆ' ನಾಯಕಿ ರಾಗಿಣಿ

Posted By:
Subscribe to Filmibeat Kannada

'ಗಂಡೆದೆ'ಯ ನಾಯಕಿ ರಾಗಿಣಿ ದ್ವಿವೇದಿ ಮಲಯಾಳಂ ಚಿತ್ರರಂಗಕ್ಕೆ ವರ್ಗವಾಗಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಜೊತೆ ಒಮ್ಮೆಯಾದರೂ ನಟಿಸಬೇಕು ಎಂಬುದು ಬಹಳಷ್ಟು ನಟಿಯರಕನಸು. ಈ ಕನಸು ರಾಗಿಣಿ ದ್ವಿವೇದಿ ವಿಚಾರದಲ್ಲಿ ನನಸಾಗಿದೆ. ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ರಾಗಿಣಿ ನಟಿಸಲಿದ್ದಾರೆ.

ಚಿತ್ರದ ಹೆಸರು 'ಕಾಂದಹಾರ್'. ಹೆಸರೇ ಹೇಳುವಂತೆ ಚಿತ್ರಕತೆ ಕಾಂದಹಾರ್ ವಿಮಾನ ಅಪಹರಣಕ್ಕೆ ಸಂಬಂಧಿಸಿದ್ದಾಗಿದೆ. ಇದಕ್ಕೂ ಮುನ್ನ ಕಾಂದಹಾರ್ ಚಿತ್ರಕ್ಕೆ ಪಾರ್ವತಿ ಓಮನಕುಟ್ಟನ್ ಆಯ್ಕೆಯಾಗಿದ್ದರು. ಇದೀಗ ಆ ಸ್ಥಾನಕ್ಕೆ ಹೊಸದಾಗಿ ರಾಗಿಣಿ ಅವರನ್ನು ಆಯ್ಕೆ ಮಾಡಲಾಗಿದೆ.

'ಹೋಲಿ' ಚಿತ್ರದ ಮೂಲಕ ರಾಗಿಣಿ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟಿದ್ದರು. ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ 'ಈ ಶತಮಾನದ ವೀರಮದಕರಿ' ಚಿತ್ರ ರಾಗಿಣಿಗೆ ಉತ್ತಮ ಹೆಸರು ತಂದುಕೊಟ್ಟಿತು. ಇದೀಗ ವಿಜಯ್ ಜೊತೆ ಅಭಿನಯದ 'ಶಂಕರ್ ಐಪಿಎಸ್' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿರಂಜೀವಿ ಸರ್ಜಾ ಜತೆ ಅಭಿನಯದ ಗಂಡೆದೆ ಹಾಗೂ ನಾಯಕ ಚಿತ್ರಗಳು ತೆರೆಕಾಣಬೇಕಾಗಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada