»   » ಕಿರುತೆರೆ ನಟ ಅನಿಲ್ ಕಾಮತ್ ಇನ್ನು ನೆನಪು ಮಾತ್ರ

ಕಿರುತೆರೆ ನಟ ಅನಿಲ್ ಕಾಮತ್ ಇನ್ನು ನೆನಪು ಮಾತ್ರ

Posted By:
Subscribe to Filmibeat Kannada
Anil Kamat
ಕಿರುತೆರೆ ನಟ, ಬಹುಮುಖ ಪ್ರತಿಭಾಶಾಲಿ ಅನಿಲ್ ಕಾಮತ್ ಇಂದು (ಮಾ.4) ಬೆಳಿಗ್ಗೆ 8ಗಂಟೆಗೆ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಡುಗಾರ, ಸಂಗೀತಗಾರ, ನಟನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಅನಿಲ್ ಕಾಮತ್ ಅವರಿಗೆ 42 ವರ್ಷ ವಯಸ್ಸಾಗಿತ್ತು.

ಭಾವಗೀತೆಗಳಿಗೆ ಸಂಗೀತ ಸಂಯೋಜಿಸುವ ಕಾಯಕದಿಂದ ಆರಂಭವಾದ ಅವರ ಜೀವನ ನಟನೆಯವರೆಗೂ ಹಬ್ಬಿತ್ತು. ಕಿರುತೆರೆ ಧಾರಾವಾಹಿಗಳಾದ ಮನ್ವಂತರ, ಪುಣ್ಯಕೋಟಿ, ಮಳೆಬಿಲ್ಲು, ಗಾಜಿನ ಗೊಂಬೆ ಹೀಗೆ ಹಲವಾರು ದೈನಂದಿನ ಧಾರಾವಾಹಿಯಲ್ಲಿ ಅನಿಲ್ ಕಾಮತ್ ಅಭಿನಯಿಸಿದ್ದರು. ಪ್ರಮುಖ ಪಾತ್ರ ಹರಿದಾಸ್ ನುಗ್ಗೆಕೋಟೆ ಎಂಬ ಪಾತ್ರದಲ್ಲಿ ಸತತ ನಾಲ್ಕು ವರ್ಷಗಳ ಕಾಲ 'ಮಳೆಬಿಲ್ಲು' ಧಾರಾವಾಹಿಯಲ್ಲಿ ಪಾತ್ರದೊಳಗೆ ಹೊಕ್ಕು ಅಭಿನಯಿಸಿದ್ದರು ಅನಿಲ್ ಕಾಮತ್ ಹೆಗ್ಗಳಿಕೆ.

'ಮಾಯಾಮೃಗ' ಧಾರಾವಾಹಿಯಲ್ಲಿ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ನಟನೆಯ ಮಾಧ್ಯಮಕ್ಕೆ ಅಡಿ ಇಟ್ಟಿದ್ದರು. ಸದಾ ಎಲ್ಲರನ್ನೂ ನಗಿಸುತ್ತ ಯಾವಾಗಲೂ ನಗುನಗುತ್ತಾ ಇರಬೇಕು ಎನ್ನುತ್ತಿದ್ದ ಎಲ್ಲರ ನೆಚ್ಚಿನಗೆಳೆಯ ಅನಿಲ್ ಕಾಮತ್ ಇಂದು ಅಗಲಿರುವುದು ನೋವಿನ ಸಂಗತಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada