»   »  ಸುದೀಪ್ ಅಭಿನಯದ 'ತೀರ್ಥ' ಏನಾಯ್ತು?

ಸುದೀಪ್ ಅಭಿನಯದ 'ತೀರ್ಥ' ಏನಾಯ್ತು?

Subscribe to Filmibeat Kannada

ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಸುದೀಪ್ ಚಿತ್ರಗಳು ತೆರೆಕಾಣಲು ಒದ್ದಾಡಿದ ಉದಾಹರಣೆ ಇಲ್ಲ. ಅವರ ಅಭಿನಯದ ಚಿತ್ರಗಳು ನಿರ್ಮಾಪಕರಿಗೆ ಮಿನಿಮಮ್ ಬಂಡವಾಳ ತಂದು ಕೊಡುವುದರಲ್ಲಿ ಅನುಮಾನವಿಲ್ಲ. ಆದರೆ ಮಲಯಾಳಂ ಚಿತ್ರದ ನೆರಳಿನಲ್ಲಿ ಮೂಡಿಬರುತ್ತಿದ್ದ 'ತೀರ್ಥ' ಚಿತ್ರದ ಚಿತ್ರೀಕರಣ ಆರಂಭವಾಗಿ ಹೆಚ್ಚುಕಮ್ಮಿ ಎರಡು ವರ್ಷವಾದರೂ ಚಿತ್ರದ ಬಿಡುಗಡೆ ಬಗ್ಗೆ ನಿರ್ದೇಶಕ ಸಾಧುಕೋಕಿಲ, ಚಿತ್ರತಂಡ ಅಥವಾ ನಿರ್ಮಾಪಕರು ತುಟಿಪಿಟಿಕ್ ಎಂನ್ನುತ್ತಿಲ್ಲ.

ವಿಷ್ಣುವರ್ಧನ್ ಅಭಿನಯಿಸಿ ಸಾಧಾರಣ ಯಶಸ್ಸು ಗಳಿಸಿದ್ದ 'ಏಕದಂತ' ಚಿತ್ರದ ನಿರ್ಮಾಪಕರಾದ ಗೋಪಿ ಮತ್ತು ಶ್ರೀರಾಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ನಂದಿ ಮತ್ತು ನ್ಯೂಸ್ ಚಿತ್ರಗಳನ್ನು ಇವರು ನಿರ್ಮಿಸಿದ್ದರು. ಸರಿಯಾದ ದಾರಿಯಲ್ಲೇ ನಡೆಯುತ್ತಿದ್ದ 'ತೀರ್ಥ' ಚಿತ್ರ ನಿರ್ಮಾಪಕರು ಮತ್ತು ಫೈನಾನ್ಸಿಯರ್ ನಡುವಿನ ಮನಸ್ತಾಪದಿಂದ ಅರ್ಧದಲ್ಲೇ ನಿಂತಿದೆ.

ಏಕದಂತ ಚಿತ್ರಕೂಡಾ ಬಜೆಟ್ ತೊಂದರೆಯಿಂದ ಒಂದು ವರ್ಷದ ನಂತರ ಬಿಡುಗಡೆಗೊಂಡಿತ್ತು.'ತೀರ್ಥ' ಚಿತ್ರದಿಂದ ಸುದೀಪ್ ಇಮೇಜ್ ಗೂ ಕೊಂಚ ಘಾಸಿಯಾಗಿದೆ. ಹಣಕಾಸಿನ ಮುಗ್ಗಟ್ಟು ಏನೇ ಇದ್ದರೂ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ಖಂಡಿತ ಬಿಡುಗಡೆ ಮಾಡುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕರು. ಚಿತ್ರದ ತಾರಾಗಣದಲ್ಲಿ ಸಲೋನಿ, ಅನಂತನಾಗ್, ರಂಗಾಯಣ ರಘು ಸೇರಿದಂತೆ ಮುಂತಾದವರು ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada