»   »  ರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ

ರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ

Posted By:
Subscribe to Filmibeat Kannada
Rajkumar fans caned near Samadhi
ಕಂಠೀರವ ಸ್ಟುಡಿಯೋದ ಡಾ.ರಾಜ್ ಸಮಾಧಿ ಬಳಿ ನೂಕು ನುಗ್ಗಲು ಉಂಟಾಗಿ ಅಭಿಮಾನಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಶುಕ್ರವಾರ(ಏ.24)ನಡೆಯಿತು. ಸುಮಾರು 11ರಿಂದ 11.30ರ ಸಮಯದಲ್ಲಿ ಕಂಠೀರವ ಸ್ಟುಡಿಯೋದ ರಾಜ್ ಸಮಾಧಿ ಸ್ಥಳಕ್ಕೆ ರಾಜ್ಯದ ನಾನಾ ಕಡೆಗಳಿಂದ ಅಭಿಮಾನಿಗಳ ಮಹಾಪೂರವೇ ಹರಿದುಬಂದಿತು.

ಡಾ.ರಾಜ್ 81ನೇ ಹುಟ್ಟುಹಬ್ಬದ ನಿಮಿತ್ತ ಅನ್ನದಾನ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಮಜ್ಜಿಗೆ ಮತ್ತು ಪಾನಕಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಅನ್ನದಾನ ಸ್ವೀಕರಿಸುತ್ತಿದ್ದ ಸಾಲಿನಲ್ಲಿ ಇದ್ದಕ್ಕಿದ್ದಂತೆ ನೂಕುನುಗ್ಗಲು ಉಂಟಾಯಿತು. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ನೂಕು ನುಗ್ಗುಲಿನಲ್ಲಿ ಸಿಕ್ಕಿಕೊಂಡು ಒದ್ದಾಡುವಂತಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಗೆ ಬುದ್ಧಿ ಹೇಳಲೇ ಬೇಕಾಯಿತು.

ಅಸಮರ್ಪಕ ವ್ಯವಸ್ಥೆ ಮತ್ತು ಪರಿಸ್ಥಿತಿಯನ್ನು ಸಿಬ್ಬಂದಿ ವರ್ಗ, ಭದ್ರತಾ ಸಿಬ್ಬಂದಿ ನಿಯಂತ್ರಿಸಲು ಸಾಧ್ಯವಾಗದೇ ಇದ್ದದ್ದೇ ನೂಕುನುಗ್ಗಲಿಗೆ ಕಾರಣವಾಯಿತು. ಪೊಲೀಸರ ಸಂಖ್ಯೆ ಸಹ ಕಡಿಮೆ ಪ್ರಮಾಣದಲ್ಲಿತ್ತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಶಾಂತವಾಯಿತು. ಯಾವುದೇ ದುರ್ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ:

ಕವನ ನಮನ: ನೆನಪಿನ೦ಗಳದಲ್ಲಿ ಡಾ|ರಾಜ್
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada